ಗಂಗಾವತಿ :ಇದೆ ಫೆಬ್ರವರಿ 14 2019 ನಮ್ಮ ಭಾರತ ದೇಶದ ಸೈನಿಕರು ಪ್ರಯಾಣಿಸುತ್ತಿದ್ದ, ಟ್ರಕ್ಕಿಗೆ ಪಾಕಿಸ್ತಾನದ ಒಬ್ಬ ದುಷ್ಕರ್ಮಿ ಕಾರಿನಲ್ಲಿ 300ಕೆಜಿ  ತೂಕದ ಬಾಂಬ್ ಅನ್ನು ತಂದು ಸ್ಫೋಟಗೊಳಿಸಿದನು, ಅದಲ್ಲಿದ್ದಂಥ 40 ಜನ ವೀರ ಯೋಧರು ವೀರಮರಣ ಹೊಂದಿದರು, ಅದಕ್ಕೆ ಈ ದಿನವನ್ನು ನಾವು ಕರಾಳ ದಿನವೆಂದು ಪರಿಗಣಿಸಿ. ನಮ್ಮ ಗಂಗಾವತಿಯ ಅಖಿಲ ಕರ್ನಾಟಕ ಆರಕ್ಷರ ಅಭಿಮಾನಿಗಳ ಬಳಗದ ಯುವಕರ ಬಳಗ ವತಿಯಿಂದ  ಶ್ರೀ ಕೃಷ್ಣಾದೇವರಾಯ ವ್ರತ್ತದ ಬಳಿ ದೀಪ ಹಚ್ಚಿ ನಮನಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಹೆಚ್.ಶೇಖರಪ್ಪ, ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಮಂಜುನಾಥ, ಕಾರಟಗಿ ಪಿಐ ಹೆಚ್.ಎಂ.ಸಿದ್ರಾಮಯ್ಯಸ್ವಾಮಿ,ಕುಷ್ಟಗಿ ಪೊಲೀಸ್ ಠಾಣೆ ಸಿಪಿಐ ನಿಂಗಪ್ಪ,ಕನಕಗಿರಿ ಪಿಐ ಜಗದೀಶ್ ಸಂಘದ ಅಧ್ಯಕ್ಷ ಈಶ್ವರ ಉಪಾಧ್ಯಕ್ಷರಾದ ಕೆ.ಎಮ್.ಶರಣಯ್ಯಸ್ವಾಮಿ, ಸುನೀಲ್, ಶರಣಪ್ಪ, ನಿತಿನ್ ಸೇರಿದಂತೆ ಇತರರು ಇದ್ದರು

error: Content is protected !!