

ಗಂಗಾವತಿ:ಪೇಜ್ ಪ್ರಮುಖರು ಸಂಕಲ್ಪಯಾತ್ರೆ ಅಂಗವಾಗಿ ಗಂಗಾವತಿ ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ ಅವರಿಗೆ ಗಂಗಾವತಿ ನಗರದ ಸಿಬಿಎಸ್ ವೃತದಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ನಗರದ ತೆರದ ವಾಹನಗಳ ಮೂಲಕ ಜೂನಿಯರ್ ಕಾಲೇಜ್ ಮೈದಾನಕ್ಕೆ ಬಂದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ ಕುಮಾರ್ ಕಟೀಲವರಿಗೆ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಂಸದ ಸಂಗಣ್ಣ ಕರಡಿ,ಮಾಜಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ ಇನ್ನೂ ಪ್ರಮುಖ ನಾಯಕರ ಇದ್ದರು.