
ಫೇಬ್ರವರಿ ತಿಂಗಳು ಬಂದರೆ ಪ್ರೇಮಿಗಳಿಗೆ ಸಂಭ್ರಮವೋ ಸಂಭ್ರಮ. ಪರಸ್ಪರ ಪ್ರೀತಿ ಹಂಚುಕೊಳ್ಳುವ ಸುದಿನ ಪ್ರೇಮಿಗಳ ದಿನಾಚರಣೆ. ಅದೇ ತಿಂಗಳಲ್ಲಿ ಆತ ಬರ್ತಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ. ರಾತ್ರಿ ಬರ್ತಡೇ ಆಚರಿಸಿಕೊಂಡ ಯುವಕ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದ.
ಎಲ್ಲರೂ ಅದನ್ನು ಆತ್ಮಹತ್ಯೆ ಅಂತಲೇ ತಿಳಿದು ಕೊಂಡಿದ್ರು. ಆದರೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಜಿಲ್ಲೆಯ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ಗ್ರಾಮದ ಮಂಜುನಾಥ್ ಹಾಗೂ ಹರ್ಷಿತಾ ಇಬ್ಬರು ಯುವ ದಂಪತಿ. ಇದೀಗ ಹರ್ಷಿತಾ, ತನ್ನ ಅಕ್ರಮ ಬಂಧಕ್ಕಾಗಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಹರ್ಷಿತಾ ಯಾರಿಗೆ ಸುಪಾರಿ ಕೊಟ್ಟಿದ್ದು ಅನ್ನೋ ವಿಚಾರ ಕೂಡ ಬಯಲಿಗೆ ಬಂದಿದೆ. ಹರ್ಷಿತಾಳ ಚಿಕ್ಕಮ್ಮನ ಮಕ್ಕಳಾದ ರಘು ಹಾಗೂ ಪ್ರಿಯತಮ ರವಿಕಿರಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಹರ್ಷಿತಾಳನ್ನೂ ಕೂಡ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆಗಿದ್ದೇನು..?
ಫೆಬ್ರವರಿ 3ರಂದು ಕುಣಿಗಲ್ ಪಟ್ಟಣದಲ್ಲಿ ಮಂಜುನಾಥ, ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ರಾತ್ರಿ ಸೀನಪ್ಪನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿರುತ್ತಾನೆ. ಮಧ್ಯರಾತ್ರಿ 12ರ ಸಮಯದಲ್ಲಿ ಫೋನ್ ಕಾಲ್ ಒಂದು ಬರುತ್ತದೆ. ಕೂಡಲೇ ಅಲ್ಲಿಂದ ಎದ್ದು ಹೋಗಿದ್ದ ಮಂಜುನಾಥ್ ಮತ್ತೆ ವಾಪಸ್ ಬರಲೇ ಇಲ್ಲ.
ಬೆಳಗ್ಗೆ ಎದ್ದು ಹುಡುಕಾಡಿದಾಗ ಮಂಜುನಾಥ್ ಶವ ಊರಿನ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ತೀವ್ರ ವಿಚಾರಣೆ ವೇಳೆ ಕೊಲೆಗೆ ಹೆಂಡತಿಯೇ ಸುಪಾರಿ ನೀಡಿರೋದು ಕುಣಿಗಲ್ ಪೊಲೀಸರು ತಿಳಿದುಬಂದಿದೆ. ಚಿಕ್ಕಮ್ಮನ ಮಗನ ಜೊತೆ ಅಕ್ರಮ ಸಂಬಂಧಕ್ಕಾಗಿ ಸಪ್ತಪದಿ ತುಳಿದು, ಕೈಹಿಡಿದ ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.