
ಗಂಗಾವತಿ :ಜ.30:ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಲಾ ಸೂರ್ಯಕುಮಾರಿ ಕರ್ತವ್ಯಲೋಪ ಆರೋಪದಡಿ *ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್* ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.


ಈ ಕುರಿತಂತೆ ಜನೇವರಿ 30 ರಂದು ಆದೇಶ ಹೊರಡಿಸಿರುವ ಜಿ.ಪಂ. ಸಿಇಓ ಬಿ.ಫೌಜೀಯಾ ತರನ್ನುಮ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನಲ್ಲಿ ಕೇವಲ ಶೇಕಡಾ 64ರಷ್ಟು ಗುರಿ ಮಾತ್ರ ಸಾಧಿಸಿದ್ದು, ಯಾವುದೇ ಲೇಬರ್ ಎಂಗೇಜ್ ಮಾಡದೇ ಕರ್ತವ್ಯಲೋಪ, ನರೇಗಾ ಯೋಜನೆ ದಾಖಲೆಗಳನ್ನು 21 ಅಂಶಗಳ ಚೆಕ್‌ಲೀಸ್ಟ್ ಪ್ರಕಾರ ಅಪ್‌ಡೆಟ್ ಮಾಡದಿರುವುದು, ಸಾಮಾಜಿಕ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಈ ಹಿಂದೆ ಕಾರ್ಯನಿರ್ವಹಿಸಿದ ಹಣವಾಳ, ಸಂಗಾಪುರ ಮತ್ತು ಡಣಾಪುರ ಗ್ರಾ.ಪಂ.ಗಳ ಆಕ್ಷೇಪಣೆಗೆ ಸಂಬಂಧಿಸಿದಂತೆ ತಿಳುವಳಿಗೊಳಿಸದೇ ಬಾಕಿ ಉಳಿಸಿಕೊಂಡಿರುವುದು, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳ ಹೊಸ ತೆರಿಗೆ ನಿಯಮಗಳಂತೆ ಪರಿಷ್ಕರಿಸಿ ಅಪ್‌ಡೇಟ್ ಮಾಡದಿರುವುದು, ಮೊಬೈಲ್ ಟವರಳ ಬಾಕಿ ತೆರಿಗೆಯನ್ನು ವಸೂಲಿ ಮಾಡದೇ ಬೇಜವಾಬ್ದಾರಿ ತೋರಿರುವುದು ಸೇರಿದಂತೆ ಒಟ್ಟು 11 ಕಾರಣಗಳನ್ನು ನೀಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್, ಪಿಡಿಓ ನೀಲಾ ಸೂರ್ಯಕುಮಾರಿ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು-1958ರ ನಿಯಮ, 98ರ ಅನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಮುಂದಿನ ಆದೇಶದವರೆಗೆ ವಿಚಾರಣೆಯನ್ನು ಕಾಯ್ದಿರಿಸಿ ತತ್‌ಕ್ಷಣದಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಜಾರಿ ಮಾಡಿದ್ದಾರೆ.