
ಕೊಪ್ಪಳ : ‘ಜೆಡಿಎಸ್’ ಅಧಿಕಾರಕ್ಕೆ ಬಂದರೆ ವಿಧವಾ ವೇತನ ಮಾಸಿಕ 2500 ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಜೆಡಿಎಸ್’ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ‘ಸ್ತ್ರೀ ಶಕ್ತಿ’ ಸಂಘದ ಸಾಲಮನ್ನಾ ಮಾಡಲಾಗುತ್ತದೆ.
ವಿಧವಾ ವೇತನ ಮಾಸಿಕ 2500 ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.ಸರ್ಕಾರದ ಖಜಾನೆಯನ್ನು ಕೆಲವರು ದೋಚುತ್ತಿದ್ದಾರೆ. 40-50 % ಕಮಿಷನ್ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆ ರಾಜ್ಯದಲ್ಲಿ ಭರ್ಜರಿಯಾಗಿ ಸಂಚರಿಸುತ್ತಿದ್ದು, ಯಾತ್ರೆ ಕೊಪ್ಪಳಕ್ಕೆ ಆಗಮಿಸಿದೆ. ಕೊಪ್ಪಳದ ತಾವರಗೇರಾ ಪಟ್ಟಣಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದೆ. ತೆರೆದ ವಾಹನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯಿಂದ ರೋಡ್ ಶೋ ನಡೆದಿದೆ. ಹೆಚ್ಡಿಕೆಗೆ ಹೂವಿನ ಮಳೆಗೈದು ಅಭಿಮಾನಿಗಳು, ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ.