
ಬೆಳಗಾವಿ: ಜಮೀನು ಖರೀದಿ ಪತ್ರ ಮಾಡಿಕೊಡಲು ಲಂಚ ಸ್ವೀಕರಿಸುವ ವೇಳೆ ಚಿಕ್ಕೋಡಿ ಹಿರಿಯ ಉಪ ನೋಂದಣಾಧಿಕಾರಿ, ಕಚೇರಿ ಸಹಾಯಕ ಹಾಗೂ ಮಧ್ಯವರ್ತಿ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕೋಡಿಯ ಹಿರಿಯ ಉಪ ನೋಂದಣಾಧಿಕಾರಿ ಜಿ.ಪಿ.ಶಿವರಾಜು, ಸಹಾಯಕ, ಕಂಪ್ಯೂಟರ್ ಆಫರೇಟರ್ ಹುಸೇನ್ ಇಮಾವಸಾಬ ರೆಹಮಾನ್‌ಭಾಯಿ ಹಾಗೂ ಸಂದೀಪ ಶಂಕರ ಪಾಟೀಲ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಡೋಣೆವಾಡ ಗ್ರಾಮದಲ್ಲಿ ಜಮೀನು ಖರೀದಿಸಿದ್ದ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಚಿಯ ರಾಜು ಲಕ್ಷ್ಮಣ ಪಾಶ್ಚಾಪುರೆ ಅವರು, ನೋಂದಣಿಗೆ ಎಲ್ಲ ಹಂತದ ಸರ್ಕಾರಿ ಶುಲ್ಕ ಪಾವತಿಸಿದ್ದರೂ, ಹೆಚ್ಚುವರಿಯಾಗಿ 30 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಜು ಪಾಶ್ಚಾಪುರೆ ಅವರು ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಮಂಗಳವಾರ ಎಸ್ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಕಾರ್ಯಾಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸಿ 30 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.