
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇವತ್ತು ಒಂದು ವಿಚಿತ್ರ ಘಟನೆಯಾಗಿದೆ. ವ್ಯಕ್ತಿಯೊಬ್ಬರು ಹಣದ ಮಳೆಯನ್ನೇ ಸುರಿಸಿದ್ದಾರೆ. ಹೌದು, ಇಲ್ಲಿನ ಕೆ ಆರ್ ಮಾರ್ಕೆಟ್ ಬಳಿ ಸೂಟು ಬೂಟು ಹಾಕೊಂಡು, ಬ್ಯಾಗಲ್ಲಿ ದುಡ್ಡು ತುಂಬ್ಕೊಂಡು ಕೊರಳಿಗೆ ಗಡಿಯಾರವನ್ನ ನೇತು ಹಾಕೊಂಡು ಬಂದ ವ್ಯಕ್ತಿಯೊಬ್ರು ಫ್ಲೈ ಓವರ್ ಮೇಲಿಂದ ಹಣವನ್ನ ಜನರತ್ತ ಚೆಲ್ಲಿದ್ದಾರೆ.
ಎಲ್ಲವೂ 10,20,50,100, 200ರೂಪಾಯಿ ಮುಖಬೆಲೆಯ ನೋಟುಗಳು ಅಂತ ಹೇಳಲಾಗ್ತಿದ್ದು ಹಣ ಚೆಲ್ಲಿದ ವ್ಯಕ್ತಿಯನ್ನ ಅರುಣ್ ಅಂತ ಗುರ್ತಿಸಲಾಗಿದೆ. ವ್ಯಕ್ತಿಯ ಈ ವರ್ತನೆಗೆ ಜನ ಶಾಕ್ ಆಗಿರೋದ್ರ ಜೊತೆಗೆ ಇನ್ನೇನ್ ಮಾಡ್ತಾರೆ, ಹಣ ಎತ್ಕೊಂಡು ಹೋಗಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್, ಸಮಯ ಸಿಕ್ಕರೆ ಎಲ್ಲವನ್ನೂ ಹೇಳ್ತೀನಿ, ನಾನು ರೀಲ್ ಮಾಡೋ ವ್ಯಕ್ತಿ ಅಲ್ಲ.101 ಪರ್ಸೆಂಟ್ ಒಳ್ಳೇ ಉದ್ದೇಶ ಇರುತ್ತೆ ಅಂತ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಟಪಟ್ಟಂತೆ ಕೆ ಆರ್ ಮಾರ್ಕೆಟ್ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು ಅರುಣ್‌ರನ್ನ ವಿಚಾರಣೆ ನಡೆಸಿದ್ದಾರೆ. ನೂಕು ನುಗ್ಗಲು ಉಂಟಾಗಿ, ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ ಹಾಗೇ ಟ್ರಾಫಿಕ್ ಜಾಮ್ ಕೂಡ ಆಗಿದೆ ಇದಕ್ಕೆಲ್ಲಾ ಯಾರು ಜವಾಬ್ದಾರಿ ಅಂತ ವ್ಯಕ್ತಿಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಅರುಣ್, ಹಲವು ಜನರು ಅವರಿಗೆ ಬೇಕಾದ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿಕೊಳ್ತಾರೆ. ಅದೇ ಉದ್ದೇಶ ನನಗೂ ಇತ್ತು. ಅದನ್ನ ಬಿಟ್ರೆ ಬೇರೆ ಉದ್ದೇಶ ಇರಲಿಲ್ಲ ಅಂತ ಹೇಳಿದ್ದಾನೆ.