
ಸೋಶಿಯಲ್ ಮೀಡಿಯಾ (Social Media) ಎಂಬುದು ಒಂದು ಮನೋರಂಜನೆಯ ಮಾಧ್ಯಮ ಎಂದರೆ ತಪ್ಪಾಗದು. ಏಕೆಂದರೆ ಇತ್ತೀಚೆಗೆ ಟಿವಿ ಮಾಧ್ಯಮಗಳಿಗಿಂತ (Tv Channel) ಮೊದಲು ಒಂದು ಸುದ್ದಿ, ಕಾರ್ಯಕ್ರಮಗಳು ಪ್ರಸಾರವಾಗುತ್ತದೆ ಎಂದರೆ ಅದು ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ.
ಅದೇ ರೀತಿ ಸೋಶಿಯಲ್ ಮೀಡಿಯಾಗಳು ಇತ್ತೀಚೆಗೆ ಕೆಲವರ ಉದ್ಯೋಗ ತಾಣ ಅಂತಾನೇ ಹೇಳ್ಬಹುದು. ಏಕೆಂದರೆ ಈ ಸಾಮಾಜಿಕ ಮಾಧ್ಯಮಗಳು ಅಷ್ಟು ಅಭಿವೃದ್ಧಿಯಾಗಿದೆ. ಇದೇ ಕಾರಣಕ್ಕೆ ಅನೇಕ ಕಂಪೆನಿಗಳು ತನ್ನ ಉತ್ಪನ್ನಗಳ ಬಗ್ಗೆ, ಅನೇಕ ಜನರು ತನ್ನ ವಿಚಾರಗಳ ಬಗ್ಗೆ ಈ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ಮೂಲಕ ಪ್ರಮೋಷನ್ ಮಾಡುತ್ತಾರೆ. ಅದೇ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಮೋಷನ್ಗಾಗಿಯೇ (Social Media Promotion) ಕೆಲವೊಂದು ಪೇಜ್ಗಳು ಹುಟ್ಟಿಕೊಂಡಿವೆ.
ಇನ್ಮುಂದೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಮೋಷನ್ ಮಾಡುವಾಗ ಎಚ್ಚರದಿಂದ ಇರಬೇಕೆಂದು ಭಾರತ ಸರ್ಕಾರ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ಸೊಶೀಯಲ್ ಮೀಡಿಯಾ ಪ್ರಭಾವಿಗಳಿಗೆ ಹೊಸ ಅನುಮೋದನೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ತಾವು ಹಣ ಪಡೆದು ಪ್ರಚಾರ ಮಾಡುತ್ತಿರುವ ವಿಷಯವನ್ನು ಬಹಿರಂಗ ಪಡಿಸದಿದ್ದರೆ 50 ಲಕ್ಷ ದಂಡ ವಿಧಿಸುವುದಾಗಿ ನಿಯಮ ಜಾರಿ ಮಾಡಿದೆ.
ಏನಿದು ಹೊಸ ರೂಲ್ಸ್?
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹೆಚ್ಚು ಫಾಲೋವರ್ಸ್ ಹೊಂದಿದ್ದವರಿಗೆ ಎಲ್ಲಿಲ್ಲದ ಬೇಡಿಕೆ. ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವವರು ತಮ್ಮ ಅಕೌಂಟ್ಗಳ ಮೂಲಕ ಕೆಲವು ಬ್ರಾಂಡ್ಗಳ ಬಗ್ಗೆ ಪ್ರಮೋಷನ್ ಮಾಡುತ್ತಾರೆ. ಅದೇ ರೀತಿ ಇದಕ್ಕಂತನೇ ಕಂಪೆನಿಗಳು ಕೂಡ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಹಣವನ್ನು ಸಹ ಪಾವತಿಸುತ್ತದೆ.
ಆದರೆ ಇನ್ಮುಂದೆ ಹಣ ಪಡೆದುಕೊಂಡು ಪ್ರಮೋಷನ್ ಮಾಡುವವರು ಈ ವಿಚಾರವನ್ನು ಕೂಡ ಫಾಲೋವರ್ಸ್‌ಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. ಬದಲಿಗೆ ಹಣ ಪಡೆದುಕೊಂಡು ಅದರ ಗುಣಮಟ್ಟ ಹೇಗೆ ಇದ್ದರು ಸಹ ಫಾಲೋವರ್ಸ್‌ಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರೆ 50 ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂದು ಹೊಸ ಅನುಮೋದನೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
10 ಲಕ್ಷದಿಂದ 50 ಲಕ್ಷದವರೆಗೆ ದಂಡ
ಈ ಸೋಶಿಯಲ್ ಮೀಡಿಯಾಗಳಲ್ಲಿ ಆಗುತ್ತಿರುವ ಪ್ರಚಾರ ಪ್ರಕರಣಗಳ ಕುರಿತು ಗ್ರಾಹಕ ವ್ಯವಹಾರಗಳ ಇಲಾಖೆ ಹೊಸ ಅನುಮೋದನೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಹೊಸ ನಿಯಮಗಳ ಪ್ರಕಾರ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರು ಪ್ರಚಾರದ ಉದ್ದೇಶವನ್ನು ಸರಿಯಾಗಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ವಿಚಾರವನ್ನು ಬಹಿರಂಗಪಡಿಸದಿದ್ದರೆ ಪ್ರಾರಂಭದಲ್ಲಿ 10 ಲಕ್ಷ ರೂಪಾಯಿ ದಂಡ ವನ್ನು ಸರ್ಕಾರ ವಿಧಿಸುತ್ತದೆ. ಇದೇ ತಪ್ಪನ್ನು ಪುನರಾವರ್ತನೆ ಮಾಡಿದರೆ 50 ಲಕ್ಷ ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಉತ್ಮನ್ನಗಳನ್ನು ಬಳಸಿ ಪ್ರಚಾರ ಮಾಡಬೇಕು
ಪ್ರಸ್ತುತ ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಗ್ರಾಹಕ ಸಂರಕ್ಷಣಾ ಕಾಯಿದೆ, 2019ಗೆ ಅನುಗುಣವಾಗಿವೆ. ಈ ಕಾಯಿದೆಯು ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳಿಂದ ರಕ್ಷಿಸಲಿದೆ. ಸದ್ಯ ಹೊಸ ಸೂಚನೆಗಳ ಪ್ರಕಾರ ಸೋಶಿಯಲ್ ಮೀಡಿಯಾದಲ್ಲಿ ಯಾವ ಪ್ರೊಡಕ್ಟ್ ಅನ್ನು ಪ್ರಚಾರ ಮಾಡಲು ಬಯಸುತ್ತಾರೋ ಅದನ್ನು ನಿಜವಾಗಿಯೂ ಬಳಸಿ ಅದರ ಗುಣಮಟ್ಟದ ಬಗ್ಗೆ ಪ್ರಚಾರ ಮಾಡುಬೇಕು ಎಂದು ಹೇಳಿದ್ದಾರೆ.
ಆದ್ದರಿಂದ ತಮ್ಮ ಫಾಲೋವರ್ಸ್‌ಗಳಿಗೆ ಒಂದು ಬ್ರಾಂಡ್ನ ಬಗ್ಗೆ ಪ್ರಚಾರದ ಉದ್ದೇಶದಿಂದ ಸುಳ್ಳು ಮಾಹಿತಿಯ ಬದಲಿಗೆ ಸ್ಪಷ್ಟ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ.
ಪೇಯ್ಡ್ ಪ್ರಮೋಷನ್ ಮಾಡುವವರಿಗೆ ಅನ್ವಯ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಇದು ಪ್ರಮೋಷನ್ಗಾಗಿರುವಂತಹ ಉತ್ತಮ ವೇದಿಕೆ. ಆದರೆ ಈ ಸೋಶಿಯಲ್ ಮೀಡಿಯಾ ಪ್ರಭಾವಿಗಳು ತಮ್ಮ ಫಾಲೋವರ್ಸ್‌ಗಳಿಗೆ ಪ್ರೊಡಕ್ಟ್ಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಅದಕ್ಕಾಗಿ ಸರ್ಕಾರದ ಈ ನಿಯಮ ಸೋಶಿಯಲ್ ಮೀಡಿಯಾದಲ್ಲಿ ಯಾರೆಲ್ಲಾ ಬ್ರಾಂಡ್ಗಳ ಬಗ್ಗೆ ಪ್ರಚಾರ ಮಾಡುತ್ತಾರೋ ಅವರಿಗೆಲ್ಲರಿಗೂ ಅನ್ವಯವಾಗುತ್ತದೆ