ಬಳ್ಳಾರಿ. ನಗರದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಶ್ರೀ ಹನುಮಂತಪ್ಪ ಪೊಲೀಸ್ ಇವರು ಬಳ್ಳಾರಿ ಜಿಲ್ಲಾ ಪೊಲೀಸ್ S. P. ಕಚೇರಿಯಲ್ಲಿ ಸುಮಾರು ವರ್ಷಗಳಿಂದ  ಸೇವೆಯನ್ನು ಸಲ್ಲಿಸುತ್ತಿದ್ದಾಗ ಈಗ ಇವರಿಗೆ ಸೇವೆಯಲ್ಲಿ  ಮುಂಬಡ್ತಿ ಹೊಂದಿದ್ದು  ಕೌಲ್ ಬಜಾರ್  ಪೊಲೀಸ್ ಸ್ಟೇಷನ್ ಗೆ ಎ ಎಸ್ ಐ ಯಾಗಿ ಇವರು ಅಧಿಕಾರ ಸ್ವೀಕರಿಸಿಕೊಂಡ ನಂತರ ಇವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಇವರ ಸೇವೆಯನ್ನು ಗುರುತಿಸಿ ಇವರು ನೊಂದ ಬೆಂದ ಅನ್ಯಾಯಕ್ಕೆ ಒಳಗೊಂಡ ಬಡ ಕಾರ್ಮಿಕರಿಗೆ ದೀನ ದಲಿತರಿಗೆ ನ್ಯಾಯ ಕೊಡಿಸುವ ನ್ಯಾಯ ಕೊಡಿಸುವಲ್ಲಿ ಇವರು ಎತ್ತಿದ ಕೈ ಇವರ ಸೇವೆ ತುಂಬಾ  ಜನರಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದು ಉತ್ತಮ ಸೇವೆ ಸಲ್ಲಿಸಿದ್ದರಿಂದ ಇವರಿಂದ ಉನ್ನತ ಸ್ಥಾನಕ್ಕೆ ಬೆಳೆಯಲೆಂದು ಹಾರೈಸಿ ಮತ್ತು ಇವರಿಗೆ ಹೂವಿನ ಹಾರ ಹಾಕಿ ಗೌರವವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಶ್ರೀ ಸಿ ಈಶ್ವರ ರಾವ್ ವಕೀಲರು ಸಂಗನಕಲ್ಲು ಜಿಲ್ಲಾಧ್ಯಕ್ಷ ಧರ್ಮಣ್ಣ  ಜಿಲ್ಲಾ ಕಾರ್ಯಧ್ಯಕ್ಷ ಸಿ ಹನುಮೇಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ್ ನಗರ ಘಟಕ ಅಧ್ಯಕ್ಷ ಮಧುರಾಜ್ ಗೋನಾಳ್ ಹಾಗೂ ಇನ್ನಿತರರು ಭಾಗವಹಿಸಿದ್ದರು

error: Content is protected !!