ಕೊಪ್ಪಳ :ಜನವರಿ 17: ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗಾಗಿ ಕೊಪ್ಪಳ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರದಂದು ಚಾಲನೆ ನೀಡಲಾಯಿತು.

ಕೌಶಲ್ಯಾಭಿವೃದ್ಧಿ, ಉದ್ಯಮಶೀ¯ತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕೊಪ್ಪಳ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಸಂಜೀವಿನಿ-ಕೆ.ಎಸ್.ಅರ್.ಎಲ್.ಪಿ.ಎಸ್,ನ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಕೊಪ್ಪಳ ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು ಹುಡೇದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 6 ದಿನಗಳ ಅವಧಿಯ ತರಬೇತಿಯಲ್ಲಿ ಮಹಿಳೆಯರಿಗೆ ಉದ್ಯಮ ಮಾಡಲು ಸರ್ಕಾರದಿಂದ ಅನೇಕ ಯೋಜನೆಗಳು ಇರುತ್ತವೆ. ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವದು ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯ ಮಿಶನ್ ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿಗಳಾದ ಪ್ರಾಣೇಶ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿ, ಎಸ್.ಎ.ಜಿ ಗುಂಪಿನ ಸದ್ಯಸ್ಯರುಗಳಿಗೆ ನಡೆತ್ತಿರುವ ಈ ತರಬೇತಿಯಲ್ಲಿ ಉದ್ಯಮವನ್ನು ಯಾವ ರೀತಿ ಮಾಡಬೇಕು ಅದಕ್ಕೆ ಬೇಕಾದಂತಹ ಮಾಹಿತಿ ಮತ್ತು ಮಾರ್ಗದರ್ಶನವನ್ನು ಸಿಡಾಕ್ ಸಂಸ್ಥೆಯಿಂದ ಪಡೆದು ಯಶಸ್ವಿ ಉದ್ಯಮಶೀಲರಾಗಿ ಎಂದು ತಿಳಿಸಿದರು.

ನಿವೃತ್ತ ಹಿರಿಯ ಶಿಕ್ಷಕರಾದ ಬಿ.ಜಿ ಹುಲಿ ಅವರು, ಸಣ್ಣ ಉದ್ಯಮವನ್ನು ಮಾಡುವ ಬಗೆಯನ್ನು ಉದಾರಣೆಯೊಂದಿಗೆ ವಿವರಿಸುತ್ತಾ ತಮ್ಮಲ್ಲಿ ಇರುವ ಕೌಶಲ್ಯವನ್ನು ಹೆಚ್ಚಿಸುವದರ ಮೂಲಕ ಜ್ಞಾನವನ್ನು ಸಂಪಾದನೆಯನ್ನು ಮಾಡಬೇಕು ಎಂದು ತಿಳಿಸಿದರು.
ಎನ್.ಆರ್.ಎಲ್.ಎಮ್, ಕೊಪ್ಪಳ ತಾಲ್ಲೂಕ ವ್ಯವಸ್ಥಾಪಕ ಎಚ್.ಕೆ ಸುನೀಲ್ ಅವರು, ಸ್ತ್ರೀ ಸಾಮಾರ್ಥ್ಯ ಯೋಜನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ ಅಬ್ದುಲ್ ರೆಹಮಾನ್, ಎನ್.ಆರ್.ಎಲ್.ಎಮ್ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟಪ್ಪ ಶೀಗನಳ್ಳಿ ಮತ್ತು ಎನ್.ಆರ್.ಎಲ್.ಎಮ್‌ನ ವಿದ್ಯಾಲಕ್ಮೀ ಸೇರಿದಂತೆ ಮತ್ತಿತರರು ಉಪಸ್ಥಿತರಿದರು. ಸಿಡಾಕ್ ತರಬೇತಿದಾರರಾದ ಕುಮಾರಿ ಅಕ್ಷತಾ ಮತ್ತು ನಾಗರಾಜ ಮುಧೋಳ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಕೊಪ್ಪಳ ತಾಲೂಕಿನ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರುಗಳು ಭಾಗವಹಿಸಿದ್ದರು.

error: Content is protected !!