ಕೊಪ್ಪಳ: ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯನ್ನು ಬಳಸಬೇಕು ಮನೆಯಿಂದಲೇ ಕಸವನ್ನು ವಿಂಗಡಿಸಿಕೊಡಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜೀಯಾ ತರುನ್ನುಮ್ ಅವರು ಹೇಳಿದರು.

ತಾಲೂಕಿನ ಬೇವಿನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಕೊಪ್ಪಳ ಮತ್ತು ತಾಲೂಕ ಪಂಚಾಯತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಚಿಲುಮೆ ಭಾಗ-2 ಅಭಿಯಾನದಡಿ ಹಮ್ಮಿಕೊಂಡಿದ್ದ ಸ್ವಚ್ಛ ಶುಕ್ರವಾರ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮಸ್ಥರು ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.

ಬಯಲು ಶೌಚಮುಕ್ತ ಗ್ರಾಮವನ್ನಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಶೌಚಾಲಯಗಳ ಬಳಕೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ತಿಳಿಸಿದರು.

ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ, ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಮಾಡುವ ಸ್ವಚ್ಛತಾ ವಾಹನಕ್ಕೆ, ಒಣ ಮತ್ತು ಹಸಿ ಕಸವನ್ನು ಮನೆ ಹಂತದಲ್ಲೇ ವಿಂಗಡಿಸಿ ಕೊಡಬೇಕು. ಇದರಿಂದ ಗ್ರಾಮದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ.

ಗ್ರಾಮದ ಸ್ವಚ್ಛತೆಗೆ ಮೊದಲ ಪ್ರಾತಿನಿಧ್ಯವನ್ನು ಪ್ರತಿಯೊಬ್ಬರು ನೀಡುವುದು ತಮ್ಮ ಕರ್ತವ್ಯವು ಆಗಿದೆ. ಶಾಲಾ ವಿದ್ಯಾರ್ಥಿಗಳು ತಮ್ಮ ಪಾಲಕರಿಗೂ ಮಾಹಿತಿ ನೀಡಿ ಎಲ್ಲರೂ ಕೂಡಿ ಗ್ರಾಮದ ಸ್ವಚ್ಛತೆ ಮಾಡೋಣ ಎಂದರು.

ನಂತರ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ  ಮಾತನಾಡಿ ಕಸವಿಂಗಡಣೆ ಮಾಡಿ,ಶೌಚಾಲಯ ಬಳಕೆ ಮಾಡಿ,ಪ್ಲಾಸ್ಟಿಕ್ ಬಳಕೆ ಯಿಂದ ಹಾಗೂ ಎಲ್ಲಂದರಲ್ಲಿ ಬಿಸಾಕುವುದರಿಂದ ಪರಿಸರದ ಮೇಲೆ ಹಾಗೂ ಆರೋಗ್ಯಕ್ಕೂ ದುಷ್ಪರಿಣಾಮ ಉಂಟಗುತ್ತದೆ ಎಂದರು.

ನಂತರ ಶಾಲಾ ಮಕ್ಕಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಜನಪ್ರತಿನಿಧಿಗಳು ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜಿಪಿಎಲ್.ಎಫ್ ಒಕ್ಕೂಟದ ಮಹಿಳೆಯರು, ಗ್ರಾ.ಪಂ ಸಿಬ್ಬಂದಿಗಳ ಜೊತೆಗೂಡಿ ಶಾಲಾ ಆವರಣವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕರಾದ ಮಹೇಶ ಹಡಪದ, ಸೌಮ್ಯ ಕೆ, ಜಿಲ್ಲಾ ಸಮಾಲೋಚಕರಾದ ಬಸಮ್ಮ ಹುಡೇದ್, ಮಾರುತಿ,  ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಹಾಗೂ ಗ್ರಾ.ಪಂ ಸರ್ವಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಒಕ್ಕೂಟದವರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

error: Content is protected !!