
ತಾವರಗೇರಾ : ನಮ್ಮ ಸಮಾಜದಲ್ಲಿ ಈಚೆಗೆ ವಚನ ಸಾಹಿತ್ಯ ಪರಂಪರೆ ಮರೆಮಾಚುತ್ತಿದೆ. ಶರಣರ ಸಾಹಿತ್ಯ ಉಳಿವಿಗಾಗಿಯೇ 12 ನೇ ಶತಮಾಣದಲ್ಲಿ ಪ್ರಪಂಚದಲ್ಲಿಯೇ ಮೊದಲ ಬಾರಿ ರಾಜ್ಯದ ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಲಾಯಿತು ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಎಸ್ ಗೋನಾಳ ಹೇಳಿದರು.
ಸಮೀಪದ ಮೆಣೇಧಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು (ರಿ) ಮೈಸೂರು, ಜಿಲ್ಲಾ ಘಟಕ, ತಾಲ್ಲೂಕು ಘಟಕ ,ತಾವರಗೇರಾ ಹೋಬಳಿ, ಎಸ್ಡಿಎಂಸಿ ಆಶ್ರಯದಲ್ಲಿ ಗುರುವಾರ ನಡೆದ ವಚನ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶದ ಸಂಪ್ರದಾಯ ವನ್ನು ವಚನ ರಚನೆ ಮೂಲಕ ಸಾರಲು ಕಾರ್ಯದಲ್ಲಿ ಹಲವರು ಶರಣರು, ಲೇಖಕರು ಪುಸ್ತಕಗಳನ್ನು ಪ್ರಕಟಣೆ ಮಾಡಿದ್ದರು.
ಈಚೆಗೆ ªಆದುನಿಕ ಕಾಳದಲ್ಲಿ ವಚನಗಳು ಮರೆ ಮಾಚುತ್ತಿದ್ದು, ಆದ್ದರಿಂದ ಸಮಾಜದಲ್ಲಿ ಶರನರ ವಚನ ಸಾಹಿತ್ಯದ ಅಭಿರುಚಿ ಮೂಡಿಸುವ ಕಾರ್ಯ ಶರಣ ಸಾಹಿತ್ಯ ಪರಿಷತ್ತು ಮಾಡುತ್ತದೆ. ಇಂತಹ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಿದ ಸ್ಥಳಿಯ ಎಸ್ಡಿಎಂಸಿ, ಕಸಾಪ, ಹೋಬಳಿ ಘಟಕದ ಕಾರ್ಯ ಶ್ಲಾಘನೀಯ ಎಂದರು.
ನಂತರ ನಿವೃತ್ತ ಎಎಸೈ ಶಾಂತಪ್ಪ ಮಾತನಾಡಿದರು. ಶಿಕ್ಷಕ ಮಲ್ಲಪ್ಪ ಓಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರವಚನಕಾರ ಶಿವರಾಜ ಶಾಸ್ತ್ರಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮುಖ್ಯ ಶಿಕ್ಷಕಿ ನಿಂಬಮ್ಮ ತುಂಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ನಂತರ ನಡೆದ ವಚನ ಸಾಹಿತ್ಯ ಸ್ಫರ್ಧೆಯಲ್ಲಿ ಪ್ರೌಢಶಾಲೆಯ 21 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವಚನ ವಾಚನ ಮಾಡಿದರು. ವಿಜೇತರಿಗೆ ಪರಿಷತ್ತು ವತಿಯಿಂದ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು.
ದೇವರಾಜ ಕೊಣ್ಣುರು, ಮಲ್ಲಪ್ಪ ಓಲಿ, ವನಜಾಕ್ಷಿ ಸ್ಪರ್ಧೆ ನಿರ್ಣಾಯಕರಾಗಿ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಹೋಬಳಿ ಘಟಕದ ಅಧ್ಯಕ್ಷ ಬಸವರಾಜ ದೇವರಮನಿ , ಎಸ್ಡಿಎಂಸಿ ಅಧ್ಯಕ್ಷ ಬಾಳಪ್ಪ ಮಡಿವಾಳರ, ಶೇಖರಗೌಡ ಸರನಾಡಗೌಡರ, ಬೇಬಿರೇಖಾ ಉಪ್ಪಳ. ಪಿ ವಾಯ್ ದಾಸರ, ಹನಮಂತಪ್ಪ ಶಿರವಾರ, ರವಿಂದ್ರನಾಥ, ಮಲ್ಲಮ್ಮ ನಾಲತವಾಡ , ಶಾಲೆಯ ಸಿಬ್ಬಂದಿ ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು, ಸದಸ್ಯರು ವಿದ್ಯಾರ್ಥಿಗಳು ಇದ್ದರು,
ತಾವರಗೇರಾ ಸಮೀಪದ ಮೆಣೇಧಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ವಚನ ಸಾಹಿತ್ಯ ಕಾರ್ಯಕ್ರಮ ನಡೆಯಿತು
ತಾವರಗೇರಾ ಸಮೀಪದ ಮೆಣೇಧಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ವಚನ ಸಾಹಿತ್ಯ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಎಸ್ ಗೋನಾಳ ಮಾತನಾಡಿದರು.