ಬೀದರ : ಜಿಲ್ಲಾಡಳಿತ ಬೀದರ, ಬೀದರ ಉತ್ಸವ-2023 ಅಂಗವಾಗಿ ಬೀದರ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಕುರಿತು ವಿಚಾರ ಸಂಕಿರಣ ಹಾಗೂ ಸಂಗೀತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನವರಿ 9 ರಂದು ಬೆಳಿಗ್ಗೆ 10.30 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮAದಿರ ಬೀದರದಲ್ಲಿ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಬಿ.ಪಾಟೀಲ ಅವರು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ, ಬೆಂಗಳೂರು ಕನ್ನಡ ಅಧ್ಯಯನ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಹೇಮಲತಾ ವಡ್ಡೆ ಅವರು ಆಶಯ ನುಡಿ, ಬೀದರ ಹಿರಿಯ ಸಾಹಿತಿಗಳಾದ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಬೀದರ ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಬೀದರ ಸಾಹಿತಿಗಳಾದ ಬಿ.ಜೆ.ಪಾರ್ವತಿ ವಿ.ಸೋನಾರೆ, ಬೀದರ ಇತಿಹಾಸ ಚಿಂತಕರಾದ ಡಾ.ಶಿವಕುಮಾರ ಉಪ್ಪೆ, ಬೀದರ ಹಿರಿಯ ಸಾಹಿತಿಗಳಾದ ಗುರುನಾಥ ಅಕ್ಕಣ್ಣ, ಬೀದರ ಇತಿಹಾಸ ಚಿಂತಕರಾದ ಡಾ.ಗಾಂಧೀಜಿ ಸಿ.ಮೊಳಕೇರಿ, ಬೀದರ ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾದ ಡಾ.ಮನ್ಮಥ ಡೋಳೆ, ಕೇಂದ್ರ ಸಮಿತಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿಗಳಾದ ಪ್ರಕಾಶ ಅಂಗಡಿ ವಹಿಸಲಿದ್ದಾರೆ.
ಉಪನ್ಯಾಸ ನೀಡುವವರ ವಿವರ: ಬೀದರ ಐತಿಹಾಸಿಕ ಪರಂಪರೆ ಕುರಿತು ಹುಮನಾಬಾದ ಸಾಹಿತಿಗಳು ಶಕೀಲ್ ಐ.ಎಸ್. ಉಪನ್ಯಾಸ ನೀಡಲಿದ್ದಾರೆ. ಹೈ.ಕ.ವಿಮೋಚನೆ, ಕರ್ನಾಟಕ ಏಕೀಕರಣ ಚಳವಳಿ, 371(ಜೆ) ಹೋರಾಟ ಮತ್ತು ಅನುಷ್ಠಾನ ಕುರಿತು ಕಲಬುರಗಿ ಹೈ.ಕ.ಇ.ರ.ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷö್ಮಣ ದಸ್ತಿ ಅವರು ಉಪನ್ಯಾಸ ನೀಡಲಿದ್ದಾರೆ. ಬೀದರ ಜಿಲ್ಲೆಯ ಭಾಷಿಕ ಸಾಮರಸ್ಯದ ನೆಲೆಗಳು ಬಗ್ಗೆ ಬೀದರ ಸಾಹಿತಿಗಳಾದ ಡಾ.ಈಶ್ವರಯ್ಯಾ ಕೊಡಂಬಲ್ ಅವರು ಉಪನ್ಯಾಸ ನೀಡಲಿದ್ದಾರೆ. ಬೀದರ ಜಿಲ್ಲೆಯ ಸಾಮಾಜಿಕ ಸಾಮರಸ್ಯದ ನೆಲೆಗಳು ಕುರಿತು ಬೀದರ ಇತಿಹಾಸ ಚಿಂತಕರಾದ ವಿನಯ ಮಾಳೆ ಅವರು ಉಪನ್ಯಾಸ ನೀಡಲಿದ್ದಾರೆ.
ಸ್ಥಳೀಯ ಕಲಾವಿದರಿಂದ ಸಂಗೀತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ವಿವರ: ವಚನ ಗಾಯನ ಬಸಯ್ಯ ಗುತ್ತೇದಾರ ಮತ್ತು ತಂಡ ಕಲಬುರಗಿ, ಸುಗಮ ಸಂಗೀತ ವಿಜಯಲಕ್ಷಿö್ಮÃ ಕೆಂಗನಾಳ ಮತ್ತು ತಂಡ ಕಲಬುರಗಿ, ಭಜನೆ ಅಕ್ಕನ ಬಳಗ ಹಿರೇಮಠ ಗಲ್ಲಿ ಭಾಲ್ಕಿ, ಭಾವಗೀತೆ ರೋಹಿತ ಕೆ. ಮತ್ತು ತಂಡ ಕಲಬುರಗಿ, ಗಝಲ್ ಗಾಯನ ಜೆ.ಚಂದ್ರಕಾAತ ಮತ್ತು ತಂಡ ಬಳ್ಳಾರಿ, ವಚನ ಗಾಯನ ಶೇಖ ಹನ್ನುಮಿಯ್ಯಾ ಮತ್ತು ತಂಡ, ಭಾಲ್ಕಿ, ಚಲನಚಿತ್ರ ಗೀತೆ ಮಹೇಶ ಕುಂಬಾರ ಮತ್ತು ತಂಡ ಬೀದರ, ಭರತ ನಾಟ್ಯ ಗಾಯತ್ರಿ ಕ್ಷೀರಸಾಗರ ಮತ್ತು ತಂಡ ಹುಮನಾಬಾದ, ಲಂಬಾಣಿ ನೃತ್ಯ ಶ್ರೀದೇವಿ ರಾಠೋಡ ಮತ್ತು ತಂಡ ಹುಲಸೂರ, ಜಾನಪದ ಗಾಯನ ರಮೇಶ ದೊಡ್ಡಿ ಮತ್ತು ತಂಡ ಮಳಚಾಪೂರ, ಸುಗಮ ಸಂಗೀತ ಶಿವಾಜಿ ಶಿವದಾಸ ಸ್ವಾಮಿ ಮತ್ತು ತಂಡ ಬೀದರ, ಭಾವಗೀತೆ ಯಶವಂತ ಕುಚಬಾಳ ಮತ್ತು ತಂಡ ಬೀದರ, ಸುಗಮ ಸಂಗೀತ ಶಾಂತಕುಮಾರ ಸ್ವಾಮಿ ಮತ್ತು ತಂಡ ಬೀದರ, ಜಾನಪದ ಗೀತೆ ಪ್ರವೀಣ ಮತ್ತು ತಂಡ ಬೀದರ, ಹಂತಿ ಪದ ಸಿದ್ದರಾಯ ಶರಣಪ್ಪ ಮತ್ತು ತಂಡ ವಿಜಯಪೂರ, ಭರತ ನಾಟ್ಯ ಶ್ರಾಯಾ ಪ್ರಲ್ಹಾದ ಕುಲಕರ್ಣಿ ಮತ್ತು ತಂಡ, ಬಾಗಲಕೋಟೆ, ಸೋಲೊ ನೃತ್ಯ ಕಿರಣ ಮತ್ತು ತಂಡ ಬೀದರ, ತತ್ವ ಪದ ಚಿನ್ನಮ್ಮಾ ಲಾಧಾ ಮತ್ತು ತಂಡ ಜೌರಾದ, ಕಥಾ ಕೀರ್ತನಾ ಪಾಂಡುರAಗ ಮಹಾರಾಜ ಮತ್ತು ತಂಡ ಬೀದರ, ಹಾಸ್ಯ ವೈಜಿನಾಥ ಸಜ್ಜನಶೆಟ್ಟಿ ಮತ್ತು ತಂಡ ಬೀದರ.