ಗಂಗಾವತಿ :ಜನರ ರಕ್ಷಣೆ ಮಾಡುವ ಪೊಲೀಸರ ಮೇಲೆ ಹಲ್ಲೆಯಾದರೆ ಸಾಮಾನ್ಯರ ಗತಿ ಹೇಗೆ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಕಳವಳ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ದಾಸನಾಳ ಸಮೀಪ ಇಬ್ಬರು ಪೊಲೀಸರ ಮೇಲೆ ಯುವಕರು ಹಲ್ಲೆ ಮಾಡಿದ್ದು ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ.ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುವ ಪೊಲೀಸರನ್ನು ಭಯಪಡದೆ ಸಾರ್ವಜನಿಕರ ಎದುರೇ ಹೊಡೆದಿದ್ದು ನೋಡಿದರೆ ಕಾನೂನು ಭಯವಿಲ್ಲಎಂದು ತಿಳಿದು ಬರುತ್ತದೆ. ಇವರನ್ನು ನೋಡಿ ಇನ್ನೂ ಅನೇಕ ಯುವಕರು ಪ್ರೇರಣೆಗೋಳಗಗುತ್ತಾರೆ ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಿ ಈಗಾಗದಂತೆ ನೋಡಿಕೊಳ್ಳಬೇಕು.  ಈ ಹಿಂದೆಯೂ ಪೊಲೀಸ್ ರ ಮೇಲೆ ಹಲ್ಲೆಗಳಾಗಿವೆ ಪೊಲೀಸರಿಗೆ ನೈತಿಕ ಧೈರ್ಯ ತುಂಬುವ ಕೆಲಸವಾಗಬೇಕು. ಗಾಂಜಾ ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಗಂಗಾವತಿ ಯಲ್ಲಿ ಯುವಕರು ಗಾಂಜಾ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ನೀರ್ಜನ ಪ್ರದೇಶ ಅಥವಾ ಪಡ್ಡೆ ಹುಡುಗರ ಗುಂಪಿನ ಮೇಲೆ ನಿಗಾ ಇಡಬೇಕು. ಗಾಂಜಾ ಮತ್ತಿತರ ಸಮಾಜಘತುಕ ಚಟುವಟಿಕೆ ಮಾಡುವ ಪತ್ತೆ ಹಚ್ಚಿ ನಿರ್ಮೂಲನೆ ಮಾಡುವ ದ್ರಷ್ಟಿಯಿಂದ ನಗರದ ಆಯಾ ವಾರ್ಡ ಸದಸ್ಯ ಅಲ್ಲಿನ ಸಮಾಜದ ಮುಖಂಡರು, ಉತ್ತಮ ಯುವಕರ, ಆ ವಾರ್ಡನಲ್ಲಿ ಇರುವ ವಿವಿಧ ಸಂಘದವರು, ಪೊಲೀಸ್ ಸಿಬ್ಬಂದಿ, ಇನ್ನಿತರರು ಸೇರಿದಂತೆ ಗಾಂಜಾ ನಿರ್ಮೂಲನೆ ಸಮಿತಿ ರಚಿಸಿ ಆಗುವ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಮ್ಯಾಗಳಮನಿ ಸಲಹೆ ನೀಡಿದ್ದಾರೆ.

error: Content is protected !!