ಗಂಗಾವತಿ :ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಗುಂಡಪ್ಪ, ಮುಖ್ಯ ಪೇದೆ ಮೀಸೆ ಬಸವರಾಜ್ ಹಾಗೂ ವಾಹನದ ಡ್ರೈವರ್ ಕನಕಪ್ಪ ಇವರು ಹೇಮಗುಡ್ಡ ದಸರಾ ಡ್ಯೂಟಿ ಮುಗಿಸಿಕೊಂಡು ಗಂಗಾವತಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ

ದಾಸನಾಳ್ ಗ್ರಾಮದ ಕೊಪ್ಪಳ ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಗಾಂಜಾ ಸೇವನೆ ಮಾಡಿ ಮತ್ತಿನಲ್ಲಿ ಕೊಪ್ಪಳ ಕಡೆಯಿಂದ ಗುಂಡಮ್ಮ ಕ್ಯಾಂಪ್ ಕಡೆಗೆ ವಿಲಿಂಗ್ ಮಾಡಿಕೊಂಡು ಬರುತಿದ್ದ ಅರ್ಬಾಜ್ ಮತ್ತು ತಂಡವನ್ನು ಕಂಡ ಪೊಲೀಸರು ಬುದ್ದಿ ಹೇಳಲು ಮುಂದಾಗಿದ್ದಾಗ ಯುವಕರು ವಿಲ್ಲಿಂಗ್ ಮಾಡಿಕೊಂಡು ಪೊಲೀಸ್ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದರು ತಕ್ಷಣ ಪೊಲೀಸರು ಅವರ ರಕ್ಷಣೆಗೆ ಧಾವಿಸಿದ್ದಾರೆ.

ರಕ್ಷಣೆಗೆ ಬಂದಾ ಪೊಲೀಸರು ಅವರಿಗೆ ಬುದ್ದಿ ಹೇಳಲು ಮುಂದಾದಾಗ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು ಗಾಂಜಾ ಮತ್ತಿನಲ್ಲಿದ್ದ ಅರ್ಬಾಜ್ ಮತ್ತು ತಂಡ ಏಕಾ ಏಕಿ ಪೋಲೀಸರ ಮೇಲೆ ಹಲ್ಲೆ ಎಸುಗಿದ್ದಾರೆ.

*ಆರಕ್ಷಕರ ಪ್ರಾಣವನ್ನೇ ರಕ್ಷಿಸಿದ   ಸಾರ್ವಜನಿಕರು*

ಇದನೆಲ್ಲ ಕಂಡ ಸ್ಥಳೀಯರು ಪೋಲೀಸರ ರಕ್ಷಣೆಗೆ ಮುಂದಾಗಿದ್ದಾರೆ ಜನರ ರಕ್ಷಣೆ ಮಾಡಬೇಕಿದ್ದ ಪೊಲೀಸರ ಜೀವವನ್ನೇ ರಕ್ಷಣೆ ಮಾಡಿದರು ಎಂದು ಮುಖ್ಯ ಪೇದೆ ಮೀಸೆ ಬಸವರಾಜ್ ಮತ್ತು ವಾಹನದ ಡ್ರೈವರ್ ಕನಕಪ್ಪ ಹೇಳಿದ್ದಾರೆ, ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ರಕ್ಷಣೆ ಇಲ್ಲಾ ಎಂದಾದರೆ ಇನ್ನು ಮಪ್ತಿಯಲ್ಲಿ ಕೆಲಸ ಮಾಡುವ ನಮ್ಮ ಸಿಬ್ಬಂದಿಗಳಿಗೆ ಉಳಿಗಾಲವಿಲ್ಲ ಎಂದು ತಮ್ಮ ನೋವನ್ನು ಹೊರಹಾಕಿದರು.

ಗಾಂಜಾ ಸೇವನೆಯಿಂದ ತಮ್ಮ ನಿಯಂತ್ರಣವನ್ನು ಕೆಳೆದುಕೊಂಡು ಯುವಕರು ಇಂತಹ ದುರ್ಘಟನೆ ಗಳು ನಡೆಯುತ್ತಲೇ ಇರುತ್ತವೆ ಸಾರ್ವಜನಿಕರು ಎಷ್ಟೋ ಬಾರಿ ಈ ತರಹದ ಗಾಂಜಾ ಘಟನೆಗಳ ಕುರಿತು ಪೊಲೀಸರಿಗೆ ದೂರನ್ನು ಕೊಟ್ಟಿದ್ದಾರೆ ಪತ್ರಿಕೆಗಳಲ್ಲಿಯೂ ಸಾಕಷ್ಟು ಬಾರಿ ಈ ಬಗ್ಗೆ ವರದಿ ಪ್ರಕಟವಾದರು. ಕೂಡ ಇದಕ್ಕೆ ಕಡಿವಾಣ ಇಲ್ಲ ಅಂತ ಸಾರ್ವಜನಿಕ ರು ಆಕ್ರೋಶ ವ್ಯಕ್ತಿ ಪಡಿಸಿದರು.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ಘಟನೆಗೆ ಕಾರಣರಾದ ಐದು ಜನ ಯುವಕರಲ್ಲಿ ಅರ್ಬಾಜ್, ವೆಂಕಟೇಶ್, ಪಂಪನಗೌಡ ಎಂಬ ಈ ಮೂರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಇನ್ನುಳಿದ ಇಬ್ಬರು ತಲೆ ಮರೆಸಿಕೊಂಡಿ ದ್ದಾರೆ ಎಂದು ಮಾಹಿತಿ ಮೂಲದಿಂದ ತಿಳಿದು ಬಂದಿದೆ

error: Content is protected !!