ಕೊಪ್ಪಳ, ಗಂಗಾವತಿ ನ್ಯಾಯಾಧೀಶರ ಶಿಫಾರಸ್ಸು
ಕೊಪ್ಪಳ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಲೋಪದೋಷಗಳು ಮರುಕಳಿಸುತ್ತಿರುವ ಹಿನ್ನೆಲೆ ಶಿಸ್ತುಕ್ರಮದ ಭಾಗವಾಗಿ
ಉಪ ನಿರ್ದೇಶಕ ತಿಪ್ಪಣ್ಣ ಶಿರಸಂಗಿ ಅವರನ್ನು ಅಮಾನತ್ತು
ಮಾಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ
ಎಂ.ಎಸ್. ಆದೇಶ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಲೋಪದೋಷಗಳ ಬಗ್ಗೆ ಮೇಲಿಂದ ಮೇಲೆ ಸಾಮಾಜಿಕ ಜಾಲತಾಣ ಮತ್ತು ಮಾಮಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧಾರಿಸಿ ಈ ಕ್ರಮ ಕೈಗೊಳ್ಳಲಾ ಗಿದೆ. ಮುಖ್ಯವಾಗಿ ಇಲ್ಲಿನ ನ್ಯಾಯಾಲಯದಲ್ಲಿನ ಕಾನೂನು ಸೇವೆಗಳ ಘಟಕವು, ಕಾರಟಗಿ ಕನಕಗಿರಿ ಮತ್ತು ಗಂಗಾವತಿ ವ್ಯಾಪ್ತಿಯಲ್ಲಿ ನಡೆದ ಹಲವುಘಟನೆಗಳನ್ನು ಉಲ್ಲೇಖಿಸಿ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿತ್ತು.
ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಘಟಕವು, ಸರ್ಕಾರಕ್ಕೆ ಸಲ್ಲಿಸಿದ ವರದಿ ಆಧಾರಿಸಿ ಈ ಕ್ರಮ ಕೈಗೊಳ್ಳ ಲಾಗಿದೆ. ಇಲಾಖೆಯ ಜಿಲ್ಲಾ ಹಂತದ ಅಧಿಕಾರಿಗಳ ವೈಫಲ್ಯ ಗಳ ವರದಿ ಆಧಾರದಿಂದ ಇದೀಗ ಸರ್ಕಾರದ ಅಧೀನಕಾರ್ಯದರ್ಶಿ ರಶ್ಮಿ, ಉಪ ನಿರ್ದೇಶಕ ತಿಪ್ಪಣ್ಣ ಶಿರಸಂಗಿ ಅವರ ಮೇಲೆ ವಿಚಾರಣೆ ಬಾಕಿ ಇರಿಸಿ ಅಮಾನತ್ತು ಮಾಡಿದೆ.
ಘಟನೆಗಳ ಸರಮಾಲೆ: ಕಾರಟಗಿ ತಾಲ್ಲೂಕಿನ ಗುಂಡೂರ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ‘ಮೊಟ್ಟೆ ಮಾಯ’ ಪ್ರಕರಣ, ಗಂಗಾವತಿಯ 7ನೇ ವಾರ್ಡ್‌ಲ್ಲಿ ಅಂಗನವಾಡಿ ಕೇಂದ್ರದ ‘ಸೀಲಿಂಗ್ ಕುಸಿದು ನಾಲ್ಕಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ’ ಕಾರಟಗಿ ಪಟ್ಟಣದ ಬೀದಿಬದಿಯ ಹೋಟೆಲ್ ಒಂದರಲ್ಲಿ ಬಾಣಂತಿಯರಿಗೆ ವಿತರಿಸುವ ಉದ್ದೇಶಕ್ಕೆ ಅಂಗನವಾಡಿ ಕೇಂದ್ರ ಗಳಿಗೆ ಪೂರೈಕೆಯಾಗುವ ‘ಮಸಾಲೆ ಪದಾರ್ಥಗಳು’ ಪತ್ತೆಯಾದ ಹಿನ್ನೆಲೆ ಪ್ರಕರಣವನ್ನುನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದರು.
ಅಲ್ಲದೇ ಕಾರಟಗಿ ಪಟ್ಟಣದ ಬೀದಿಬದಿಯ ಹೋಟೆಲ್ ಒಂದರಲ್ಲಿ ಬಾಣಂತಿಯರಿಗೆ ವಿತರಿಸುವ ಉದ್ದೇಶಕ್ಕೆ ಅಂಗನವಾಡಿ ಕೇಂದ್ರ ಗಳಿಗೆ ಪೂರೈಕೆಯಾಗುವ ‘ಮಸಾಲೆ ಪದಾರ್ಥಗಳು’ ಪತ್ತೆಯಾದ ಹಿನ್ನೆಲೆ ಇಲಾಖೆಯಲ್ಲಿ ನಡೆಯುತ್ತಿರುವ ಲೋಪ ದೋಷಗಳನ್ನು ಗಂಭೀರವಾಗಿ ಪರಿಗಣಿಸಿ ಈ ಶಿಸ್ತುಕ್ರಮ ಕೈಗೊಳ್ಳಲಾಗದೆ.
*ಬಾಕ್ಸ್ *
ಸರಿಯಾದ ಕ್ರಮಗಳನ್ನು ಕೈಗೊಳ್ಳಲು ವಿಫಲ
ಕೊಪ್ಪಳದಲ್ಲಿ ಸಾಲು ಸಾಲು ಅಕ್ರಮಗಳು, ಅವ್ಯವಸ್ಥೆಯ ಘಟನೆಗಳು ನಡೆದಿದ್ದರೂ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತ್ತು ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಅವರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆಯೇ ತಿಪ್ಪಣ್ಣ ಸಿರಸಗಿಗೆ ನೋಟಿಸ್ ನೀಡಿದ್ದ ಸರ್ಕಾರ, ಅಧಿಕಾರಿಯಿಂದ ವರದಿ ಕೇಳಿತ್ತು. ಇನ್ನು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಿಪ್ಪಣ್ಣ ಸಿರಸಗಿ ಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿಗಳ ಅಕ್ರಮ ಮತ್ತು ಅವ್ಯವಸ್ಥೆಗೆ ಜಿಲ್ಲೆಯ ಉಪ ನಿರ್ದೇಶಕನ ಅಮಾನತ್ತು ಮಾಡಿ ಸರ್ಕಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಆದ್ರೆ, ಜಿಲ್ಲೆಯಲ್ಲಿ ಅಕ್ರಮ ಮತ್ತು ಅವ್ಯವಸ್ಥೆಗೆ ಕೆಳಹಂತದಿಂದ ಮೇಲಿನ ಹಂತದವರಗೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವದರ ಜೊತೆಗೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.