ಗಂಗಾವತಿ :ಗಾಂಧೀಜಿ ಜಯಂತಿ ನಿಮಿತ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಗಾಲಿ ಜನಾರ್ಧನ್ ರಡ್ಡಿ ಶಾಸಕರಿಗೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ.
ನಂತರ ಮಾತನಾಡಿ ಗಂಗಾವತಿ ನಗರದ ಪ್ರಮುಖ ವೃತ್ತಗಳಾದ ಜುಲೈ ನಗರ, ಕನಕದಾಸ ವೃತ್ತ, ನೀಲಕಂಟೆಶ್ವರ ವೃತ್ತ, ಸೇವಾಲಾಲ್ ವೃತ್ತ, ಹೆರಿಗೆ ಆಸ್ಪತ್ರೆ ಹತ್ತಿರ,ಹಾಗೂ ನಗರದ ಎಲ್ಲಾ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿದ್ದು ಶಾಲಾ ವಾಹನಗಳು, ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋಗಳು,ಸಾರಿಗೆ ಬಸ್ ಗಳು, ದ್ವಿಚಕ್ರ ವಾಹನಗಳು, ಟ್ರಿಪರ್, ಟ್ಯಾಕ್ಟ್ ರಗಳು ಸಾಕಷ್ಟು ಪ್ರಮಾಣದಲ್ಲಿ ಸಂಚರಿಸುತ್ತಿವೆ, ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಮಣ್ಣು ಹಾಕದೇ ಕೂಡಲೇ ಡಾ0ಬರೀಕರಣಗೊಳಿಸಿ ಗುಂಡಿಗಳನ್ನು ಮುಚ್ಚಬೇಕು.ಮತ್ತು ಎಲ್ಲಾ ಬಸ್ ಗಳು ಸಂಚರಿಸುವ ಜುಲೈ ನಗರದಲ್ಲಿ ಬಸ್ ನಿಲ್ದಾಣವಿಲ್ಲದೆ ವೃದ್ದರಿಗೆ, ಮಕ್ಕಳಿಗೆ,ಮಹಿಳೆಯರಿಗೆ, ವಿಕಲಚೇತನರಿಗೆ ಹಾಗೂ ಎಲ್ಲಾ ಪ್ರಯಾಣಿಕರಿಗೂ ಬಿಸಿಲು, ಮಳೆಗಾಲದಲ್ಲಿ ಹಾಗೂ ಆಸನ ವ್ಯವಸ್ಥೆ ಇಲ್ಲದಿರುವದರಿಂದ ಎಲ್ಲಾ ಕಾಲದಲ್ಲಿ ತೊಂದರೆಯಾಗುತ್ತಿದೆ ಕೂಡಲೇ ಬಸ್ ನಿಲ್ದಾಣ ನಿರ್ಮಿಸಬೇಕು.
ರಾಜ್ಯದಲ್ಲಿಯೇ ಬಸ್ ನಿಲ್ದಾಣದ ಸಮೀಪದಲ್ಲಿರುವ ಉದ್ಯಾನವನ ಅಂದರೆ ಗಂಗಾವತಿ ನೆಹರೂ ಉದ್ಯಾನವನ ಎಂದರೆ ತಪ್ಪಾಗದು. ಅಂಥಹ ಉದ್ಯಾನವನ ಸ್ವಚ್ಛತೆಯಿಲ್ಲದೆ,ಕುಡಿಯುವ ನೀರಿಲ್ಲದೇ ಆಸನಗಳು ಇಲ್ಲದೆ . ಹುಲಿಗೆಮ್ಮ ದೇವಸ್ಥಾನ, ಅಂಜನಾದ್ರಿ ಬೆಟ್ಟಕ್ಕೆ ದೂರದಿಂದ ಬರುವ ಪ್ರಯಾಣಿಕರು, ಕಾಲೇಜುಗಳಿಗೆ ಬಂದು ಆಹಾರ ಸೇವಿಸುವ ವಿದ್ಯಾರ್ಥಿಗಳು,ವಾಯ ವಿಹಾರಕ್ಕೆ ಬರುವ ನಗರದ ನಿವಾಸಿಗಳಿಗೆ ಅನಾನುಕೂಲವಾಗಿದೆ. ಸುಂದರ ಉದ್ಯಾವನ ವನ್ನಾಗಿ ಮಾಡಬೇಕು. ಐತಿ ಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಅಂಜನಾದ್ರಿ ಪ್ರಸಿದ್ಧ ಹೊಂದಿದೆ. ರಾಮನ ಹೆಸರಿನ ಜೊತೆಗೆ ಹನುಮನ ಹೆಸರು ಅಷ್ಟೇ ಖ್ಯಾತಿ ಪಡೆದಿದೆ. ಹನುಮನು ಜನಿಸಿದ ಪ್ರದೇಶ ನಮ್ಮದಾಗಿರುವದರಿಂದ ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ತಾಲೂಕ ಅಧ್ಯಕ್ಷ ಜಡಿಯಪ್ಪ ಹಂಚಿನಾಳ,ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಕೃಷ್ಣ ಮೆಟ್ರಿ, ಮುತ್ತು ಹೊಸಳ್ಳಿ ರಾಘು ಅಯೋಧ್ಯ, ಬಸವರಾಜ. ನಾಯಕ, ಸೋಮು, ರಾಮಣ್ಣ ರುದ್ರಾಕ್ಷಿ, ಮಂಜು ಚನ್ನದಾಸರು, ಶಾಬೀರ್, ಹುಲ್ಲೇಶ ಮುಂಡಾಸ್, ಮಾರುತಿ, ಮಲ್ಲಿಕಾರ್ಜುನ, ಪರಶುರಾಮ್,ರಾಮಣ್ಣ,ಚ ನ್ನಬಸವ,ಅನಿಲಕುಮಾರ ಮತ್ತಿತರರು ಇದ್ದರು.