ಮಡಿಕೇರಿ ಜ.07:-ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ನಿರ್ದೇಶನದಂತೆ ಯಾವುದೇ ಆಸ್ತಿಗೆ ಡಿಜಿಟಲ್ ಸಹಿಯುಳ್ಳ ನಮೂನೆ 3/ ಫಾರಂ-3 ಕೊಡಲು ಮಾತ್ರ ಅವಕಾಶವಿದ್ದು, ಕೈಬರಹದ ಸಹಿಯುಳ್ಳ ನಮೂನೆ-3/ ಫಾರಂ-3ನ್ನು ನಾಗರಿಕರಿಗೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 9543 ಆಸ್ತಿಗಳು ಇದ್ದು, ಈ ಪೈಕಿ ಈಗಾಗಲೇ 4653 ಆಸ್ತಿಗಳಿಗೆ ಆಸ್ತಿಯ ಮಾಲೀಕರು ನಿಯಮಾನುಸಾರ ಅವಶ್ಯವಿರುವ ದಾಖಲೆಗಳನ್ನು ಹಾಜರುಪಡಿಸಿ ನಮೂನೆ-3/ ಫಾರಂ-3 ಪಡೆದುಕೊಂಡಿದ್ದಾರೆ. 4890 ಆಸ್ತಿಗಳ ಮಾಲೀಕರು ಆನ್‍ಲೈನ್ ಡಿಜಿಟಲ್ ಸಹಿ ಇರುವ ನಮೂನೆ-3 ಫಾರಂ 3 ಯನ್ನು ಪಡೆದುಕೊಂಡಿರುವುದಿಲ್ಲ.

ಕರ್ನಾಟಕ ಪೌರ ಸುಧಾರಣಾ ಕೋಶ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಅವರು ಪ್ರತಿ ನಾಗರಿಕರಿಗೆ ಇ-ಆಸ್ತಿ ನಮೂನೆ-3/ ಫಾರಂ 3 ನ್ನು ಸುಲಭವಾಗಿ ಪ್ರತಿ ಆಸ್ತಿಯ ಫಾರಂ 3 ಯನ್ನು ಎಂಆರ್‍ಸಿ ವೆಬ್‍ಸೈಟ್‍ನಿಂದ ಅವರಾಗಿಯೇ ಸೃಜಿಸಿಕೊಳ್ಳಲು ಅವಕಾಶವಾಗುವ ರೀತಿ ತಂತ್ರಾಂಶವನ್ನು ಸರಳೀಕರಣ ಮಾಡಿ ನಾಗರಿಕರಿಗೆ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಆಸ್ತಿ ಕಣಜ ತಂತ್ರಾಂಶ ಬಿಡುಗಡೆ ಮಾಡಿದ್ದು, ನಗರಸಭೆ ವ್ಯಾಪ್ತಿಯ ಪ್ರತಿ ಆಸ್ತಿ ವಿವರಗಳು ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವ ವ್ಯವಸ್ಥೆ ಆಗಬೇಕಿದೆ.   

ಆದ್ದರಿಂದ ‘ಈವರೆಗೆ ಆನ್‍ಲೈನ್ ಫಾರಂ 3 ಪಡೆಯದ’ ಮಡಿಕೇರಿ ನಗರಸಭೆ ವ್ಯಾಪ್ತಿಯೊಳಗೆ ಬರುವ ಪ್ರತಿ ಆಸ್ತಿ ಮಾಲೀಕರು ಆಸ್ತಿ ಕಣಜ ತಂತ್ರಾಂಶದಲ್ಲಿ ನಿಮ್ಮ ಮಾಲೀಕತ್ವದ ಸ್ವತ್ತಿನ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಆನ್‍ಲೈನ್ ಫಾರಂ 3 ಪಡೆಯುವ ಉದ್ದೇಶಕ್ಕೆ ಸ್ವತ್ತಿನ ದಾಖಲೆ ಪ್ರತಿ (ಹಾಲಿ ಯಾರ ಹೆಸರಿನಲ್ಲಿ ದಾಖಲೆ ಇದೆ ಅದರ ಪ್ರತಿಗಳು ಅಥವಾ ಖಾತೆ ದಾಖಲೆ ಇರಲಿ ಇಲ್ಲದೇ ಇರಲಿ ಲಭ್ಯವಿರುವ ದಾಖಲೆಗಳ ಪ್ರತಿ), ಮತದಾರರ ಗುರುತಿನ ಚೀಟಿ, ಪಾನ್‍ಕಾರ್ಡ್, ರೇಷನ್‍ಕಾರ್ಡ್, ಪಾಸ್‍ಪೋರ್ಟ್ ಪ್ರತಿ ಅಥವಾ ಡ್ರೈವಿಂಗ್ ಲೈಸನ್ಸ್ ಈ ಪೈಕಿ ಯಾವುದಾದರೂ ಒಂದು, ತೆರಿಗೆ ಪಾವತಿ ವಿವರಗಳು, ಕಟ್ಟಡ ಇದ್ದಲ್ಲಿ ಕಟ್ಟಡ ಪರವಾನಿಗೆ ಪ್ರತಿ, ಕಟ್ಟಡದ ಫೋಟೋ, ಖಾಲಿ ಜಾಗವಾಗಿದ್ದಲ್ಲಿ ಜಾಗದಲ್ಲಿ ಮಾಲೀಕರು ನಿಂತು ತೆಗೆದ ಫೋಟೋ, ನೀರಿನ ತೆರಿಗೆ ಪಾವತಿ ಪ್ರತಿ, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಹೊಂದಿರುವ ಆರ್‍ಆರ್ ನಂಬರ್, ಸ್ವತ್ತಿನ ಮಾಲಿಕರ ಫೋಟೋ(ಪಾಸ್‍ಪೋರ್ಟ್ ಸೈಜ್) ಮತ್ತು ಮೊಬೈಲ್ ನಮೂದಿಸುವುದು. ಈ ದಾಖಲೆಗಳನ್ನು 15 ದಿವಸದೊಳಗೆ ನಗರಸಭೆಗೆ ನೀಡಿ ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ವಿಜಯ ಅವರು ಕೋರಿದ್ದಾರೆ.

error: Content is protected !!