ಶಿವಮೊಗ್ಗ: ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಧರ್ಮ ಚಕ್ರ ಟ್ರಸ್ಟ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜನವರಿ 09 ರ ಬೆಳಿಗ್ಗೆ 10.30 ಕ್ಕೆ ರಾಮಚಂದ್ರಾಪುರ ಮಠದ ಆವರಣ, ಹೊಸನಗರ ತಾಲ್ಲೂಕು ಇಲ್ಲಿ ಸಾವಯವ ಸಿರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು.
ಗೃಹ ಸಚಿವರಾದ ಆಗರ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಲಿದ್ದು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರ ಉಪಸ್ಥಿತಿ ಇರಲಿದೆ
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಎಂಎಡಿಬಿ ಅಧ್ಯಕ್ಷರು, ರಾಮಚಂದ್ರಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಉಪಕುಲಪತಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪಶುವೈದ್ಯಕೀಯ ಮಹಾವಿದ್ಯಾಲಯ ಪಾಲ್ಗೊಳ್ಳುವರು. ಆಧುನಿಕ ಕೃಷಿ ಪದ್ದತಿ ದುಷ್ಪರಿಣಾಮಗಳ ಕುರಿತು ಬಸವಾನಂದ ಮಹಾಸ್ವಾಮಿಗಳು, ಸಾವಯವ ಕೃಷಿ ಅಗತ್ಯತೆ ಮತ್ತು ಪದ್ದತಿಗಳು ಕುರಿತು ರಾಜೇಂದ್ರ ಹಗಡೆ ಮತ್ತು ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ಕೃಷ್ಣಪ್ರಸಾದ್ ಉಪನ್ಯಾಸ ನೀಡುವರು.