ಗಂಗಾವತಿ :ಸಮಗ್ರ ಕರ್ನಾಟಕ ಜನ ಜಾಗೃತಿ ವೇದಿಕೆ(ರಿ) ರಾಜ್ಯಾಧ್ಯಕ್ಷರಾದ ಶ್ರೀ ಮೊಹಮ್ಮದ್ ರಫೀ (ಬಾಬುಗೌಡ) ರವರು, ಕರ್ನಾಟಕ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ರಾಜ್ಯದಲ್ಲಿ ರೈತ, ಬಡವರ, ಕಾರ್ಮಿಕರ ದೀನ ದಲಿತರ, ಯುವ ಜನ ಹಾಗೂ ಮಹಿಳೆಯರ ಸಮಸ್ಯೆಗಳ ವಿರುದ್ಧ ಹೋರಾಡಲು ಮತ್ತು ಸಂಘಟನೆಯನ್ನು ಪ್ರಬಲವಾಗಿ ಕಟ್ಟುವ ದೃಷ್ಟಿಯಿಂದ ಶ್ರೀಯುತ ಭಾಗ್ಯವಂತ ನಾಯಕ ತಂದೆ ರಾಮಣ್ಣ ನಾಯಕ,  ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ದಿನಾಂಕ: 05/08/2024, ಇಂದಿನಿಂದಲೇ ಅಧಿಕಾರ ವಹಿಸಿಕೊಂಡು ಸಮಗ್ರ ಕರ್ನಾಟಕ ಜನ ಜಾಗೃತಿ ವೇದಿಕೆಯ ಹಾಗೂ ಸಂವಿಧಾನ, ತತ್ವ ಸಿದ್ಧಾಂತದಡಿ ಕರ್ತವ್ಯ ನಿರ್ವಹಿಸಿಕೊಂಡು ಹೋಗಬೇಕು. ಹಾಗೂ ಸಮಾಜ ಶೋಷಿತ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿ ಇಂತಹ ಸಮಸ್ಯೆಗಳನ್ನು ರಾಜ್ಯ ಸರಕಾರ ದೃಷ್ಟಿಗೆ ತರುವಲ್ಲಿ ಸರ್ವ ರೀತಿಯಿಂದ ಪ್ರಮಾಣಿಕವಾಗಿ ಪ್ರಯತ್ನ ಮಾಡುವ ಹಿನ್ನೆಲೆಯಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಬಿ ಎಸ್ ಪಿ ಜಿಲ್ಲಾ ಸಂಚಾಲಕ ಹುಲಿಗೇಶ್ ದೇವರಮನಿ ನಿಂಗಪ್ಪ ನಾಯಕ್ ಶಾಂತ ಕುಮಾರ ಮಲ್ಲೇಶ್ ನಾಯಕ. ಸಿಡಿ ದೊಡ್ಡ ಮಾರಪ್ಪ ಇತರರು ಇದ್ದರು

error: Content is protected !!