ಅಕ್ರಮ ದಂಧೆಗಳಿಗೆ ಒಂದು ವಾರದಲ್ಲಿ ಕಡಿವಾಣ ಹಾಕದಿದ್ದರೆ ಹೋರಾಟ

ಗಂಗಾವತಿ, .ಜೂನ್ 17: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ದಂಧೆಗಳಲ್ಲಿ ಪೊಲೀಸ್ ಇಲಾಖೆಯ ಕೆಲ ಕಾನ್ಸ್‌ಟೇಬಲ್‌ಗಳು ಪಾತ್ರವಿದೆ ಎಂಬ ಅನುಮಾನವಿದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಂಶಯ ವ್ಯಕ್ತಪಡಿಸಿದ್ದಾರೆ.

ನಗರದ ಇದ್ದಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಕ್ಕದ ವಾಣಿಜ್ಯ ಮಳಿಗೆಯೊಂದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ರೆಡ್ಡಿ, ಮಟಕಾ, ಇಸ್ಪೀಟು, ಡ್ರಗ್ಸ್ ದಂಧೆಯಂತಹ ಇನ್ನಿತರ ಅಕ್ರಮ ದಂಧೆಗಳಲ್ಲಿ ಪೊಲೀಸ್ ಇಲಾಖೆಯ ಕೆಲ ಕಾನ್ಸ್‌ಟೇಬಲ್‌ಗಳು ಪಾತ್ರವಿದೆ ಎಂಬ ಅನುಮಾನವಿದೆ. ಈ ಕುರಿತಂತೆ ನಮ್ಮ ಕಾರ್ಯಕರ್ತರು ನನ್ನ ವಾಟ್ಸಪ್‌ಗೆ ಕೆಲ ವಿಡಿಯೋಗಳನ್ನು ಕಳಿಸಿದ್ದಾರೆ. ಅದರಲ್ಲಿ ಡ್ರಗ್ಸ್ ತೆಗೆದುಕೊಳ್ಳಲು ಬಳಸುವ ಸಿರಿಂಜ್‌ಗಳ ವಿಡಿಯೋಗಳೂ ಇವೆ.

ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಆಡಳಿತ ಪಕ್ಷದ ಕೆಲ ಪ್ರಮುಖ ಮುಖಂಡರು ಕಾರಣ. ಇತ್ತೀಚಿಗೆ ನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೌಡಿ ಶೀಟರ್‌ಗಳು ಮುಂದುವರೆದು ಮಾತನಾಡಿದ ಅವರು, ಅಕ್ರಮ ಚಟುವಟಿಕೆಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದರೆ “ನಾವು ದಾಳಿ ಮಾಡುವ ಮುನ್ನವೇ ನಮ್ಮ ಇಲಾಖೆಯ ಕೆಲವರು ದಂದೇಕೋರರಿಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ನಾವು ಅಸಹಾಯಕರಾಗಿದ್ದೇವೆ” ಎನ್ನುತ್ತಾರೆ. ಈ ಉತ್ತರ ಕೇಳಿ ನಗುವುದೋ ಅಳುವುದೋ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಒಂದು ವಾರದಲ್ಲಿ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನನ್ನ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಸೇರಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಮಟ್ಟದಲ್ಲಿ ಗಮನಸೆಳೆಯುವ ಕಾರ್ಯ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಹಿರಂಗವಾಗಿ ಧಮಕಿ ಹಾಕಿ ಗೂಂಡಾ ವರ್ತನೆ ತೋರಿ ಅಶಾಂತಿ ವಾತಾವರಣ ಸೃಷ್ಟಿಸಿದ್ದಾರೆ. ಈ ಪ್ರಕರಣಕ್ಕೆ ಕಾರಣರಾದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕೆಲ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು

error: Content is protected !!