ಗಂಗಾವತಿ :ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಜಿಲ್ಲೆಯಲ್ಲಿ ಸುಮಾರು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗಿದ್ದು ಅವರು ಮತದಾನದಿಂದ ವಂಚನೆಯಾಗುತ್ತಿದ್ದು ಅವರಿಗೆ ಮತದಾನದ ವ್ಯವಸ್ಥೆಯನ್ನು ಆಸ್ಪತ್ರೆಗಳಲ್ಲಿ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಜಿಲ್ಲಾ ಚುನಾವಣೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅಂಗವಿಕಲರು ಹಾಗೂ 80 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಮನೆಯಲ್ಲಿ ಮತದಾನ ಮಾಡುವಂತೆ ಅವಕಾಶ ನೀಡಿದೆ ಅದೇ ರೀತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೂ ವ್ಯವಸ್ಥೆ ಮಾಡಬೇಕು. ನಮ್ಮ ಭಾಗದಲ್ಲಿ ಬರ ಇರುವದರಿಂದ ಬೆಂಗಳೂರು, ಹಾಸನ, ಉಡುಪಿ, ಚಿಕ್ಕಮಗಳೂರು, ಸೇರಿದಂತೆ ವಿವಿಧ ನಗರಗಳಿಗೆ ದುಡಿಯಲು ವಲಸೆ ಹೋಗಿದ್ದು ಅವರನ್ನು ಸಹ ಮತದಾನದ ದಿನ ಬರುವಂತೆ ಕ್ರಮಕೈಗೊಳ್ಳಬೇಕು.
ಇದರಿಂದ ಮತದಾನದ ಪ್ರಮಾಣ ಹೆಚ್ಚು ಮಾಡಿದಂತಾಗುತ್ತದೆ.
ಈ ಹಬ್ಬದ ಕುರಿತು ಈಗಾಗಲೇ ಜಾಗ್ರತೆ ಮಾಡಿದ್ದಲ್ಲದೆ, ಪ್ರಚಾರಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದು ಸಾರ್ಥಕ ಆಗುತ್ತಾದೆಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಜೆಸಿದ್ದಾರೆ. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಚಂದ್ರು ನಿಸರ್ಗ, ಕೃಷ್ಣ ಮೆಟ್ರಿ, ಪಂಪಾಪತಿ ಕುರಿ, ರಾಘು ಕಡೆಬಾಗಿಲು, ಮುತ್ತು ಹೊಸಳ್ಳಿ ಮತ್ತಿತರರು ಇದ್ದರು.