ಗಂಗಾವತಿ, ಏ30: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಬರೀ ಎಸ್ಸಿ, ಎಸ್ಪಿ ಹಾಗೂ ಒಬಿಸಿ ವರ್ಗದವರಿಗಲ್ಲದೇ ಮೇಲ್ವರ್ಗದವರಿಗೂ ಕಲ್ಪಿಸಲು ಸಂವಿಧಾನದಲ್ಲಿ ನಿಯಮ ರೂಪಿಸಿದ್ದಾರೆ ಎಂದು ಪ್ರಗತಿಪರ ಚಿಂತಕ ರಮೇಶ ಸುಗ್ಗೇನಹಳ್ಳಿ ಹೇಳಿದರು.
ಅವರು ನಗರದ ಕೃಷ್ಣ ಹೋಟೆಲ್‌ನಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಸ್ಸಿ ಎಸ್ಟಿ ಒಬಿಸಿ ಸೇರಿದಂತೆ ಎಲ್ಲಾ ವರ್ಗದ ಜನತೆಗೆ ಎಲ್ಲಾ ಜಾತಿ ಜನಾಂಗದವರು ಸಂವಿಧಾನದ ಮೀಸಲಾತಿ ಸೌಲಭ್ಯ ದೊರಕಿದೆ. ಭಾರತ ದೇಶದ ಸಾವಿರಾರು ವರ್ಷಗಳ ಶೋಷಣೆ ಮುಕ್ತ ಸಮಾಜವನ್ನು
ಎಚ್ಚರಗೊಳಿಸಿ ದಮನಿತ ಸಮುದಾಯಗಳಿಗೆ ಬೆಳಕಾ ದವರು ಡಾ.ಬಿ.ಆರ್.ಅಂಬೇಡ್ಕರ್. ಪರಿಶ್ರಮಪಟ್ಟು ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿ ನಂತರ ಭಾರತೀಯರಿಗೆ ಅತ್ಯುನ್ನತ ಸಂವಿಧಾನವನ್ನು ಸಮರ್ಪಣೆ ಮಾಡಿದ್ದಾರೆ. ಸಂವಿಧಾನದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಕಾರಣರಾಗಿದ್ದಾರೆ. ಅಂಬೇಡ್ಕರ್ ಜಯಂತಿಗೆ ಮಾತ್ರ ಕಾರ್ಯಕ್ರಮಗಳು ಮೀಸಲಾಗದೆ ಅಂಬೇಡ್ಕರ್ ಅವರ ತತ್ವ,ಆದರ್ಶ ಮತ್ತು ಕನಸುಗಳನ್ನು ನನಸು ಮಾಡಲು ಎಸ್ಸಿ ಎಸ್ಪಿ ಒಬಿಸಿ ಸಂಘಟನೆಗಳ ಕಾರ್ಯಕರ್ತರು ಅಧ್ಯಯನ ನಡೆಸಬೇಕು. ಮೇಲ್ವರ್ಗದ ಕೆಲ ಸಮುದಾಯಗಳು ನಮಗೆಲ್ಲ ಧರ್ಮ ಗ್ರಂಥ ನೀಡಿ ತಾವು ಸಂವಿಧಾನ ಅಧ್ಯಾಯನ ಮಾಡಿ ಸರ್ಕಾರದ ಪ್ರಮುಖ ಹುದ್ದೆ ಪಡೆದಿವೆ. ಎಸ್ಸಿ ಎಸ್ಟಿ ಒಬಿಸಿ ವರ್ಗದವರು ಸತತ ಪರಿಶ್ರಮಪಟ್ಟು ಅಧ್ಯಯನ ಮಾಡಿ ಸರ್ಕಾರದ ಉನ್ನತ ಹುದ್ದೆಗೇರಬೇಕು.
ಜೊತೆಗೆ ರಾಜಕೀಯ ಶಕ್ತಿಯಾಗಿರುವ ವಿಧಾನಸೌಧ ಮತ್ತು ಸಂಸತ್ತನ್ನು ಪ್ರವೇಶ ಮಾಡಿ ಕಾನೂನು ರಚನೆ ಮಾಡುವ ಜಾಗದಲ್ಲಿ ಕುಳಿತುಕೊಳ್ಳಲು ಶತ ಪ್ರಯತ್ನ ಮಾಡಬೇಕು. ಮಧ್ಯ ಏಷಿಯಾದಿಂದ ಈ ದೇಶಕ್ಕೆ ವಲಸೆ ಬಂದ ಕೆಲ ವರ್ಗದವರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಅವರು ಪ್ರಸ್ತುತ ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿ ಕುಳಿತು ನಿಮ್ನ ವರ್ಗವನ್ನು ಶೋಷಣೆ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡು ಕೂಡಲೇ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದು ಎಸ್ಸಿ ಎಸ್ಟಿ ಒಬಿಸಿ ಮತ್ತು ಧಮನಿತ ವರ್ಗಗಳನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ವೆಂಕಟೇಶ, ಮತ್ತು ಭಾರತಿಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೆಕಲ್, ರಮೇಶ ಗಬ್ಬರು, ಪತ್ರಕರ್ತ ಕೆ.ನಿಂಗಜ್ಜಮಾತನಾಡಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಾಧ್ಯಮ ಸಲಹೆಗಾರ ಆರ್.ಚನ್ನಬಸವ ಮಾನ್ವಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾಧ್ಯಕ್ಷ ಎಚ್. ವಸಂತಕುಮಾರ, ಕಟ್ಟಿಮನಿ ಶಂಕರ ನಂದಿಹಾಳ, ಕಾಶಿನಾಥ ಕುರುಡಿ, ಜಿಲ್ಲಾಧ್ಯಕ್ಷ ರಾಯಚೂರು, ರಮೇಶ, ಹಂಪೇಶ ಅರಿಗೋಲು, ಚನ್ನಬಸವ, ಮಾರ್ಕಂಡೇಯ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ದೇವಿಕೇರಿ, ರಮೇಶ ಕಾಳಿ, ಪತ್ರಕರ್ತ ನಾಗರಾಜ ಕೊಟೈಕಲ್, ಕೆ.ಮರಿಸ್ವಾಮಿ,ಆರ್.ಟಿ.ನಾಗರಾಜ, ಕೆ.ಬಾಲಪ್ಪ ತಾಲೂಕ ಅಧ್ಯಕ್ಷ. ಶಾಂತಕುಮಾರ, ಬಸವರಾಜ ಕಲ್ಗುಡಿ, ಶಂಕರಸಿಂಗ್, ಹುಸೇನಪ್ಪ ಹಂಚಿನಾಳ, ಹುಲುಗಪ್ಪ ಮಾಸ್ತರ ವಿರೇಶ ಆರತಿ ಸೇರಿದಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಇದ್ದರು.