ಗಂಗಾವತಿ :ಸಾರ್ವಜನಿಕ ವಿತರಣೆಗಾಗಿ ಇರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಿನಿ ಅಪೆ ಆಟೋ ಮೇಲೆ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ ಪ್ರಕರಣ ಗಂಗಾವತಿ ನಗರದಲ್ಲಿ ಜರುಗಿದೆ. ಏಪ್ರಿಲ್ 17 ಬುಧವಾರ ರಾತ್ರಿ ಸುಮಾರು 8:00 ಗಂಟೆಗೆ ಪಡಿತರ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾರೆ. ಎಂಬ ಖಚಿತ ಮಾಹಿತಿ ತಿಳಿದು ಸಮಗ್ರ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಧ್ಯಕ್ಷರಾದ ಬಾಬುಗೌಡ ಅವರು 112 ಸಹಾಯವಾಣಿಗೆ ಕರೆ ಮಾಡಿ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆಟೋ ತಡೆದು. ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯವರಿಗೆ ಒಪ್ಪಿಸಿದ್ದಾರೆ.
ಗಂಗಾವತಿ ನಗರದಿಂದ ಕನಕಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆಯಲ್ಲಿರುವ KA.27 8518 ಸಂಖ್ಯೆಯ ಮಿನಿ ಅಪ್ಪಿ ಆಟೋ ಮೇಲೆ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿ ಮಾಡಲು ಬಂದ ಪೊಲೀಸರನ್ನು ಕಂಡು ಆಟೋ ಚಾಲಕ ಪರಾರಿಯಾಗಿದ್ದಾನೆ. ಎಂದು ಮಾಹಿತಿ ನೀಡಿದ್ದಾರೆ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ್ಯಕ್ಷ ಬಾಬು ಗೌಡ ಅವರು ಮಾಹಿತಿ ನೀಡಿದ ಮೇರೆಗೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಸೇರಿ ದಾಳಿ ನಡೆಸಿದ್ದಾರೆ. ಎಂದು ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳಾದ ನಾಗರತ್ನ. ಶಿರಸ್ತೇದಾರ್ ಸುಹಾಸ್ ಸಂಘಟನೆ ರಾಜ್ಯಾಧ್ಯಕ್ಷ ಬಾಬುಗೌಡ. ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.