ಗಂಗಾವತಿ: ತಾಲುಕಿನ ಆನೆಗೊಂದಿ ಉತ್ಸವ ಮಾ.11,12 ರಂದು ಜರುಗಿದ ಆನೆಗೊಂದಿ ಉತ್ಸವದ ಸಂದರ್ಭದಲ್ಲಿ ಉತ್ಸವಕ್ಕೆ ಆಗಮಿಸಿದವರಿಗೆ ಸಾರ್ವಜನಿಕರಿಗೆ ಸಿದ್ದಪಡಿದ್ದ ಅನ್ನ ಹಾಗೂ ಇತರೆ ಆಹಾರ ಪದಾರ್ಥಗಳು ಉಳಿದಿದ್ದು, ಆ ಉತ್ಸವ ಮುಗಿದ ನಂತರ ಉಳಿದ ಅನ್ನ ಪದಾರ್ಥವನ್ನು ಅಧಿಕಾರಿಗಳು ಸರಿಯಾಗಿ ಒಂದು ತಗ್ಗಿನಲ್ಲಿ ಮಣ್ಣು ಮುಚ್ಚಬೇಕಾಗಿತ್ತು ಆದರೆ ಅಧಿಕಾರಿಗಳು ಹಾಗೆ ಬಿಟ್ಟಿರುವುದರಿಂದ ಉತ್ಸವದ ಮೈದಾನ ಹಾಗೂ ಊಟದ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಚೆಲ್ಲಿದ್ದರಿಂದ ಅನ್ನವನ್ನು ಸಂಚಾರಿ ಕುರಿಗಳು, ಮೇಕೆಗಳು ತಿಂದ ಪರಿಣಾಮ 20 ಕುರಿಗಳು, ಮೇಕೆಗಳು ಸಾವನ್ನಪ್ಪಿದ್ದು 180ಕ್ಕೂ ಹೆಚ್ಚು ಕುರಿ-ಮೇಕೆಗಳು ಅಸ್ವಸ್ಥಗೊಂಡಿವೆ. ಘಟನೆ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ಮಾ.15ರ ಶುಕ್ರವಾರ ಬೆಳಗ್ಗೆ ನಡೆದಿದೆ.
ವಿಷಯ ತಿಳಿದ ಕೂಡಲೇ ಪಶುವೈದ್ಯಕೀಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಸ್ವಸ್ಥ ಕುರಿ-ಮೇಕೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪಶು ವೈದ್ಯಕೀಯ ಇಲಾಖೆಯ ಡಾ. ಜಾಕೀರ ಹುಸೇನ್, ಡಾ.ಸೋಮಪ್ಪ ಹಾಗೂ ಸಿಬ್ಬಂದಿ ವರ್ಗದವರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸುದ್ದಿ ತಕ್ಷಣ ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ. ಆನೆಗೊಂದಿ ಉತ್ಸವದಲ್ಲಿ ಉಳಿದ ಅನ್ನ ಇತರ ಪದಾರ್ಥಗಳು ಹಳಸಿದ್ದನ್ನು ವಿಲೇವಾರಿ ಮಾಡದೇ ಅಲ್ಲೇ ಬಿಸಾಕಿದ್ದನ್ನು ತಿಂದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಆಸ್ವಸ್ಥಗೊಂಡಿವೆ. ಇದಕ್ಕೆಲ್ಲ ಕಾರಣ ಅಧಿಕಾರಿಗಳ ನಿರ್ಲಕ್ಷ್ಯದ ಇಂಥ ಅವಘಡ ಸಂಭವಿಸಿದೆ.
ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸತ್ತ ಕುರಿ ಮತ್ತು ಮೇಕೆಗಳಿಗೆ ರಾಜ್ಯ ಸರ್ಕಾರ ಒಂದು ಕುರಿಗೆ ಒಂದು 15 ಸಾವಿರ ರೂಪಾಯಿ ಸುಮಾರು 20 ಕುರಿಗಳು ಸತ್ತಿದ್ದು ಮತ್ತು 180 ಕುರಿ ಅಸ್ತಿತ್ವದಲ್ಲಿದ್ದು ಆ ಎಲ್ಲಾ ಕುರುಗಳಿಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಕುರಿಗಾರರಿಗೆ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಈ ಪತ್ರಿಕೆ ಮೂಲಕ ಒತ್ತಾಯಿಸಿದರು ಎಂದು ಹೇಳಿದರು