ಗಂಗಾವತಿ: ತಾಲೂಕಿನ ಐತಿಹಾಸಿಕ ತಾಣವಾದ ಆನೆಗುಂದಿಯ ಉತ್ಸವ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಉತ್ಸವ ನಡೆಸುವ ಬಗ್ಗೆ ಕೆಲವೇ ದಿನಗಳಲ್ಲಿ ತೀರ್ಮಾನವನ್ನು ತೆಗೆದುಕೊಂಡು ತರಾತುರಿಯಲ್ಲಿ ಉತ್ಸವ ನಡೆಸುತ್ತಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿ ಮಾಡಬೇಕು ಹಾಗೂ ಕಲಾವಿದರು, ವೇದಿಕೆ, ಡೆಕೋರೇಟ್ ಅಲಂಕಾರ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಸ್ಥಳೀಯರಿಂದಲೇ ಪಡೆದು ಸ್ಥಳೀಯರಿಗೆ ವ್ಯವಹಾರ ದೊರಕುವಂತೆ ಮಾಡಬೇಕು.

ಅದರ ಬದಲಾಗಿ ಬಳ್ಳಾರಿ, ಬೆಂಗಳೂರು ಬೇರೆ ಬೇರೆ ಭಾಗದವರಿಗೆ ವ್ಯವಹಾರ ನೀಡಬಾರದು ಹಾಗೂ ಸ್ಥಳೀಯ ಕಲಾವಿದರಿಗೆ ಆಧ್ಯತೆಯನ್ನು ನೀಡಿ ಪ್ರೋತ್ಸಾಹ ನೀಡಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ದಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.

ಇಲ್ಲಿನ ಸ್ಮಾರಕಗಳು ಯಾವುದೇ ರೀತಿಯಿಂದ ರಕ್ಷಣೆ ಇಲ್ಲದೇ ಅವನತಿಯತ್ತ ಸಾಗುತ್ತಿವೆ. ಕೇವಲ ಉತ್ಸವ ಎರಡು ದಿನಕ್ಕೆ ಸೀಮಿತ ಮಾಡಿಕೊಂಡು ಸ್ಮಾರಕಗಳ ಕುರಿತು ಚರ್ಚೆ ಮಾಡದೇ ಇರುವ ಪ್ರಸಂಗ ನಡೆಯಬಾರದು.

ಈ ಉತ್ಸವ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೇ ಪಕ್ಷಾತೀತವಾಗಿ ಈ ಐತಿಹಾಸಿಕ ಉತ್ಸವ ನಡೆಸಬೇಕು. ಸ್ಮಾರಕಗಳ ಕುರಿತು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಹಾಗೂ ಅವುಗಳ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಬೇಕು. ಅವನತಿಯಲ್ಲಿರುವ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಬೇಕೆಂದು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಈ ಕುರಿತು ನಿರ್ಣಯ ತೆಗೆದುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ರೂಪಿಸಲಾಗುವುದೆಂದು ಎಚ್ಚರಿಸಿದ್ದಾರೆ.

error: Content is protected !!