ಬಳ್ಳಾರಿ :- ಇಲ್ಲಿನ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ, ಆಗಮಿಸಿ ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಹುಟ್ಟು ಹಬ್ಬದ ದಿನದಂದು ಇಡೀ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ಶಾಸಕ ಭರತ ರೆಡ್ಡಿ ನೀಡಿದ್ದರು. ಚುನಾವಣೆಗೂ‌ ಮುನ್ನ ನೀಡಿದ ಕುಕ್ಕರ್ ಸಾಕಷ್ಟು ಸದ್ದು ಮಾಡಿತ್ತು.

ತಾಲ್ಲೂಕಿನ ತಳಕು ಹೋಬಳಿಯ ಓಳಾಪುರ ಗ್ರಾಮದ ಕೆ.ಜಿ.ಜಯಣ್ಣ ಮತ್ತು ಸಹೋದರರು ತಮ್ಮ ಜಮೀನಿನ ಪಹಣ ಮತ್ತು ಇತರೆ ದಾಖಲಾತಿಗಳನ್ನು ಸಿದ್ಧ ಪಡಿಸಿಕೊಡುವಂತೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಗಂಗಯ್ಯ ಹದಿನೈದು ಸಾವಿರ ಲಂಚ ಕೇಳಿದ್ದು, ಆಪೈಕಿ ಹತ್ತು ಸಾವಿರವನ್ನು ಕಾರಿನ ಚಾಲಕ ಕಿರಣ್ ಮೂಲಕ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ.

ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಸುದೇವ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೃತ್ಯುಂಜಯ, ವೃತ್ತ ನಿರೀಕ್ಷಕ, ಪಿಎಸ್‌ಐ ಮತ್ತು ಸಿಬ್ಬಂದಿ ವರ್ಗದೊಂದಿಗೆ ಕಚೇರಿ ಮುಂದೆಯೇ ದಾಳಿ ನಡೆಸಿದ್ದು, ಕೆ.ಜೆ.ಜಯಣ್ಣರಿಂದ ಹಣ ಪಡೆದ ಚಾಲಕ ಕಿರಣ್‌ನನ್ನು ಪ್ರಶ್ನಿಸಿದಾಗ ಅಧಿಕಾರಿ ಗಂಗಯ್ಯನವರ ಸೂಚನೆಯಂತೆ ಹಣ ಪಡೆದಿರು ವುದಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ತನಿಖಾ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾನೆ.

error: Content is protected !!