ಗಂಗಾವತಿ ಫೆ.9:ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಅಂಗವಾಗಿ ತಾಲ್ಲೂಕಿನ ವಿದ್ಯಾನಗರದಲ್ಲಿರುವ ಸ್ಫೂರ್ತಿ ಆಯುರ್ವೇದಿಕ್ ಕಾಲೇಜ್ ಹಾಗೂ ಡಾ. ಎಸ್.ವಿ ಸವಡಿ ಆರ್ಯುವೇದ ಆಸ್ಪತ್ರೆ ಪ್ರತಿಷ್ಠಾನ ಸಂಸ್ಥೆಯಲ್ಲಿ ಗುರುವಾರ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ಸ್ಪೂರ್ತಿ ಆಯುರ್ವೇದಿಕ್ ಕಾಲೇಜಿನಲ್ಲಿ ವಿವಿಧ ಪತ್ತೆ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಯುರ್ವೇದ ವಿಭಾಗದ ವಿದ್ಯಾರ್ಥಿಗಳು, ಕ್ಯಾನ್ಸರ್ ರೋಗದ ಬಗ್ಗೆ ಚಿತ್ರ ಸಮೇತ ಕಿರು ಗೋಡೆಯ ಬರಹಗಳ ಫಲಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡಿದರು.
ಲಕ್ಷಣ ಕ್ಯಾನ್ಸರ್ ರೋಗಕ್ಕೆ ಕಾರಣಗಳೇನು,
ಅನಾರೋಗ್ಯಕರ ಹೇಗೆ ಜೀವನ ಶೈಲಿಯಿಂದಾಗುವ ರೋಗ ಅಪಾಯಗಳೇನು, ರೋಗ ಹೇಗೆ ಪತ್ತೆ ಮಾಡಬೇಕು, ಕ್ಯಾನ್ಸರ್ ರೋಗದಲ್ಲಿರುವ ವಿಧಗಳೆಷ್ಟು, ಚಿಕಿತ್ಸೆ ಮಾರ್ಗವೇನು, ಪರಿಣಾಮ ಏನು ಎಂಬ ಮಾಹಿತಿಯ ಬಗ್ಗೆ ಫಲಕಗಳನ್ನು ಅಳವಡಿಸಲಾಗಿತ್ತು. ರೋಗವನ್ನು ಹೇಗೆ ಪತ್ತೆ ಹಚ್ಚಬಹುದು, ಅದರ ಸಾಮಾನ್ಯ ಲಕ್ಷಣಗಳೇನು, ಕ್ಯಾನ್ಸರ್ ಪೀಡಿತ ವ್ಯಕ್ತಿಯ ಆರೋಗ್ಯದಲ್ಲಿ ಬದಲಾವಣೆಯಾಗುತ್ತವೆ. ಬಾರದಂತೆ ಏನೆಲ್ಲಾ ಮುಂಜಾಗ್ರತೆ ವಹಿಸಬಹುದು ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಿದರು.
ಈ ಸಂದರ್ಭದಲ್ಲಿ ಡಾ. ಅಬೀದ್ ಹುಸೇನ್ ಆವರಣ ಮುಖ್ಯಸ್ಥ ಡಾ. ಅಬೀದ್ ಹುಸೇನ್, ಶೈಕ್ಷಣಿಕ ಮುಖ್ಯಸ್ಥ ಡಾ. ಮೋಹನ್ ಗೋಲ್ಡ್ ಸ್ಮಿತ್, ಸಹಾಯಕ ಪ್ರಾಧ್ಯಾಪಕರಾದ ವಿನೋದ್, ಮೇಘನಾ ಪಾಟೀಲ್, ಆಡಳಿತಾಧಿಕಾರಿ ಸ್ಯಾಮುವೆಲ್ ಸೇರಿದಂತೆ ಹಲವರು ಇದ್ದರು.