ಯಾದಗಿರಿ : ಬಿಜೆಪಿ(BJP) ಮುಖಂಡ ಮಣಿಕಂಠ ರಾಠೋಡ್‌ (Manikanta ratod) ಸೋದರ ರಾಜು ರಾಠೋಡ್ ಗೆ ಸೇರಿದ ಗೋದಾಮಿನ (rice godown) ಮೇಲೆ ಪೊಲೀಸರು ದಾಳಿ (Police raid) ನಡೆಸಿದ್ದು, 700 ಕ್ವಿಂಟಾಲ್‌ ‌ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಶಹಾಪುರದಲ್ಲಿ ನಡೆದ ಪಡಿತರ ಅಕ್ಕಿ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು ತಾವು ಕದ್ದ ಅಕ್ಕಿಯನ್ನು ರಾಜು ರಾಠೋಡ್‌ ಗೆ ಮಾರಿರುವುದಾಗಿ ಹೇಳಿದ್ದರು.

ಹೀಗಾಗಿ ಸುರಪುರ ಡಿವೈಎಸ್‌ಪಿ ಜಾವೇದ್‌ ಇನಾಮ್ದಾರ್‌ ನೇತೃತ್ವದಲ್ಲಿ ಗುರ್ಮಿಟ್ಕಲ್‌ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ರೈಸ್‌ ಮಿಲ್‌ ಮೇಲೆ ದಾಳಿ ನಡೆಸಲಾಗಿತ್ತು.

ದಾಳಿಯಲ್ಲಿ ಸಿಕ್ಕ 7 ಟನ್‌ ಅಕ್ಕಿಯಲ್ಲಿ 6.3 ಟನ್‌ ಅಕ್ಕಿ ಪಡಿತರ ಗೋದಾಮುಗಳಿಂದ ಸಾಗಿಸಿದ ಅಕ್ಕಿ ಎನ್ನಲಾಗಿದೆ. ರಾಜು ರಾಠೋಡ್‌ ಸಧ್ಯಕ್ಕೆ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!