ಕುಷ್ಟಗಿ | ಜನವರಿ 04: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ಕಲ್ಪಿತರು ಸಾಂಸ್ಕೃತಿ ಯುವಕ ಸಂಘ(ರಿ) ಹಾಬಲಕಟ್ಟಿ ಕಲಾತಂಡದ ಮೂಲಕ ಜನವರಿ 05 ರಿಂದ ಜ.14ರವರೆಗೆ ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 05 ರಂದು ಬೆಳಿಗ್ಗೆ ಬೊಮ್ಮನಾಳ ಹಾಗೂ ಸಂಜೆ ನಿಲೋಗಲ್ ಗ್ರಾಮದಲ್ಲಿ, ಜ 06 ರಂದು ಬೆಳಿಗ್ಗೆ ಮಿಟ್ಟಲಕೋಡ್ ಹಾಗೂ ಸಂಜೆ ತುಗ್ಗಲದೋನಿಯಲ್ಲಿ, ಜ. 07 ರಂದು ಬೆಳಿಗ್ಗೆ ರಂಗಾಪುರ ಹಾಗೂ ಸಂಜೆ ಬಿಳೇಕಲ್‌ನಲ್ಲಿ, ಜ. 08 ರಂದು ಗುಡ್ಡದ ದೇವಲಾಪುರ ಹಾಗೂ ಸಂಜೆ ಹನುಮನಾಳದಲ್ಲಿ, ಜ. 09 ರಂದು ಪಟ್ಟಲಚಿಂಟಿ ಹಾಗೂ ಸಂಜೆ ಮಾಲಗಿತ್ತಿಯಲ್ಲಿ, ಜ.10 ರಂದು ಬೆಳಿಗ್ಗೆ ಮಾಸ್ತಲಗಟ್ಟಿ ಹಾಗೂ ಸಂಜೆ ಹಾಬಲಕಟ್ಟಿಯಲ್ಲಿ, ಜ.11 ರಂದು ಬೆಳಿಗ್ಗೆ ಕೋನಾಪುರ ಹಾಗೂ ಸಂಜೆ ಜಾಹಗೀರಗುಡದೂರದಲ್ಲಿ, ಜ.12 ರಂದು ಬೆಳಿಗ್ಗೆ ಗೊರೆಬಿಹಾಳ ಹಾಗೂ ಸಂಜೆ ತುಮರಿಕೊಪ್ಪದಲ್ಲಿ, ಜ.13 ರಂದು ಬೆಳಿಗ್ಗೆ ವಾರೀಕಲ್ ಹಾಗೂ ಸಂಜೆ ಹಿರೇ ಗೊಣ್ಣಾಗರದಲ್ಲಿ, ಜ.14 ಬೆಳಿಗ್ಗೆ ಮದ್ನಾಳ ಹಾಗೂ ಸಂಜೆ ಯರಿಗೇರಿ ಗ್ರಾಮದಲ್ಲಿ ಜನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಕಲಾವಿದರು ಆಯಾ ಗ್ರಾಮದ ಜನ ಸಂದಣಿ ಸ್ಥಳದಲ್ಲಿ ಸೇರಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನಪದ ಸಂಗೀತ ಕಾರ್ಯಕ್ರಮದ ಮೂಲಕ ಮಾಹಿತಿ ನೀಡುವರು. ಆಯಾ ಗ್ರಾಮಸ್ಥರು ಈ ಜನಪದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.