ಕೊಪ್ಪಳ ಜನವರಿ 04 (ಕರ್ನಾಟಕ ವಾರ್ತೆ): ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಜನಜಾಗೃತಿ ಕಲಾ ರಂಗ ಸಂಸ್ಥೆ(ರಿ) ಕುಷ್ಟಗಿ ಕಲಾತಂಡದ ಮೂಲಕ ಜ.5 ರಿಂದ ಜ.14 ರವರೆಗೆ ಕುಕನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಜ.05 ರಂದು ಬೆಳಿಗ್ಗೆ ಮಂಗಳೂರು ಹಾಗೂ ಸಂಜೆ ಕುದರಿಮೋತಿಯಲ್ಲಿ, ಜ.06 ರಂದು ಬೆಳಿಗ್ಗೆ ವಟಪರ್ವಿ ಹಾಗೂ ಸಂಜೆ ನೆಲಜೇರಿಯಲ್ಲಿ, ಜ.07 ರಂದು ಬೆಳಿಗ್ಗೆ ಅರಕೇರಿ ಹಾಗೂ ಸಂಜೆ ಹಿರೇಬೀಡನಾಳದಲ್ಲಿ, ಜ.08 ರಂದು ಬೆದವಟ್ಟಿ ಹಾಗೂ ಸಂಜೆ ಶಿರೂರದಲ್ಲಿ, ಜ.09 ರಂದು ಚಿಕ್ಕನಕೊಪ್ಪ ಹಾಗೂ ಸಂಜೆ ಮಂಡಲಗೇರಿಯಲ್ಲಿ, ಜ.10 ರಂದು ಬೆಳಿಗ್ಗೆ ಲಕಮಾಪುರ ಹಾಗೂ ಸಂಜೆ ಭಾನಾಪುರದಲ್ಲಿ, ಜ.11 ರಂದು ಬೆಳಿಗ್ಗೆ ಅಡವಿಹಳ್ಳಿ ಹಾಗೂ ತಳಕಲ್‌ನಲ್ಲಿ, ಜ.12 ರಂದು ಬೆಳಿಗ್ಗೆ ಆಡೂರ ಹಾಗೂ ಸಂಜೆ ರಾಜೂರಿನಲ್ಲಿ, ಜ.13 ರಂದು ಬೆಳಿಗ್ಗೆ ಮನ್ನಾಪುರ ಹಾಗೂ ಸಂಜೆ ಇಟಗಿಯಲ್ಲಿ, ಜ.14 ಬೆಳಿಗ್ಗೆ ನಿಂಗಾಪುರ ಹಾಗೂ ಸಂಜೆ ಬನ್ನಿಕೊಪ್ಪ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿದೆ.
ಕಲಾವಿದರು ಆಯಾ ಗ್ರಾಮದ ಜನ ಸಂದನಿ ಸ್ಥಳದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸಲು ಬೀದಿ ನಾಟಕ ಪ್ರದರ್ಶನ ನಡೆಸುವರು. ಆಯಾ ಗ್ರಾಮಸ್ಥರು ಬೀದಿನಾಟಕ ಪ್ರದರ್ಶನ ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.