ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಗ್ರಾಮ ಪಂಚಾಯತಿಯಲ್ಲಿನ ಭ್ರಷ್ಟಾಚಾರದ ಪುರಾಣ ಕಥೆ. ಗ್ರಾಮ ಪಂಚಾಯಿತಿ 15 ನೇಯ ಹಣಕಾಸಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಪಂಚಾಯತಿಯ ವೆಬ್ಬೆಟ್ ನಲ್ಲಿ ಹಾಕಿರುವಂತಹ ಬಿಲ್ಲುಗಳು ಸಾಕ್ಷಿಯಾಗಿವೆ. ದಿನಾಂಕ 26/06/2023 ರಂದು ತೆಗೆದ ಬಿಲ್ ವೋಚರ್ ಗಳು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಾವೆ. ಏಕೆಂದರೆ ಆ ದಿನ ಅಮೋಘ ಏಜೆನ್ಸಿ ಇಳಕಲ್ ರವರಿಗೆ 1)43,669 2)69,258 3)48,095 4)64,758 5)46,386 ಈ ಐದು ಬಿಲ್ಲುಗಳನ್ನು ಹಾಕಿದ್ದು,
ಅದರಲ್ಲಿ ಸರಿಯಾದ ಮಾಹಿತಿ ಇಲ್ಲದೇ ಪ್ರಶ್ನಾರ್ಥಕ(?) ಚಿನ್ನೆಗಳು ಎದ್ದು ಕಾಣುತ್ತಿವೆ.
ಪ್ರಶ್ನಾರ್ಥಕ ಚಿಹ್ನೆಗಳು ಹಣ ಹೊಡೆಯಲು ಹಾಕುತಿದ್ದಾರೋ? ಅಥವಾ ತಾಂತ್ರಿಕ ದೋಷದಿಂದ ಈ ರೀತಿ ಆಗುತ್ತಿದೆಯೋ? ಇದಕ್ಕೆ ಉತ್ತರ ಪಿಡಿಓ ರವರೆ ನೀಡಬೇಕಿದೆ. ಮಾಹಿತಿ ಕೇಳಲು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ನೀಡದೆ ತಪ್ಪಿಸಿಕೊಳ್ಳುತಿದ್ದಾರೆ. ಇವರ ಈ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ದಿನಾಂಕ 21/08/2023 ರಂದು ಬಸವರಾಜ ತಿಪ್ಪಣ್ಣ ಬುದನೂರು ಎಂಬುವವರಿಗೆ 50,000 ರೂ ಗಳ ಮತ್ತೊಂದು ಬಿಲ್ಲನ್ನು ಹಾಕಿದ್ದು ಆ ಬಿಲ್ಲಿನ ವಿವರಣೆಯಲ್ಲಿಯು ಸಹ ಪ್ರಶ್ನಾರ್ಥಕ ಚಿನ್ನೆಗಳು ಕಂಡು ಬಂದಿವೆ. ಪಿಡಿಓ ಮುತ್ತಣ್ಣ ಡೋಣಿ ಸರಿಯಾಗಿ ಪಂಚಾಯತಿಗೆ ಬರುವುದಿಲ್ಲ ಎಂಬ ಆರೋಪವು ಸಹ ಕೇಳಿಬರುತ್ತಿದೆ. ಗ್ರಾಮ ಅಭಿವೃದ್ಧಿ ಆಗದ ಕಾರಣ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವ್ಯಕ್ತಿ ಕಾರ್ಯ ನಿರ್ವಹಿಸುತ್ತಿರುವ ಒಂದು ಪಂಚಾಯತಿ ಯಲ್ಲಿ ಇಷ್ಟೊಂದು ಆರೋಪಗಳು
ಕೇಳಿಬರುತ್ತಿದ್ದು.ಇಂತವರನ್ನೆ ಎರೆಡೆರಡು ಪಂಚಾಯತಿಗೆ ನೇಮಕ ಮಾಡಿರುತ್ತಾರೆ.
ಒಂದೇ ಕೆಲಸ ಮಾಡದ ಸೊಂಬೇರಿಗೆ ಎರಡೆರಡು ಕೆಲಸವನ್ನು ವಹಿಸಿದಂತಾಗಿದೆ ಇಲ್ಲಿನ ಗ್ರಾಮ ಪಂಚಾಯಿತಿ ಪರಿಸ್ಥಿತಿ. ಈತನಿಗೆ ವಹಿಸಿದ ಒಂದು ಪಂಚಾಯತಿ ನಾಯನೆಗಲಿ ಆದರೆ ಮತ್ತೊಂದು ಚಿಕ್ಕ ಮ್ಯಾಗೇರಿ.
ಈ ಎರಡು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ಧಿ ಕುಂಠಿತಗೊಂಡಲ್ಲಿ ಅದಕ್ಕೆ ಮೂಲ ಕಾರಣ ಈತನೇ ಎಂದರು ತಪ್ಪಾಗಲಾರದು.
ಸರ್ಕಾರದಲ್ಲಿ ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಯೋಗ್ಯತೆ ಇರುವವರನ್ನು ಬಳಸಿಕೊಂಡು ಎರಡೆರಡು ಪಂಚಾಯತಿಗೆ ನೇಮಕ ಮಾಡಿಕೊಳ್ಳಬೇಕು, ಅದನ್ನು ಬಿಟ್ಟು ಇಂತವರಿಗೆ ಕೆಲಸ ವಹಿಸಿದರೆ ಗ್ರಾಮದ ಅಭಿವೃದ್ಧಿ ಹೇಗೆ ತಾನೇ ಆಗುತ್ತದೆ. ಸರಿಯಾಗಿ ಕಾರ್ಯ ನಿರ್ವಹಿಸದ ವ್ಯಕ್ತಿಗೆ ಎರಡೆರಡು ಪಂಚಾಯತಿಗೆ ನೇಮಕ ಮಾಡುವ ಮೂಲಕ ಇ.ಓ ರವರು ಎಡವಿದ್ದಾರಾ? ಅಥವಾ ಇದರ ಹಿಂದೆ ಯಾವುದಾದರೂ ದುರುದ್ದೇಶವಿದೆಯಾ? ಜಿಲ್ಲಾ ಪಂಚಾಯತಿ ಸಿ.ಇ.ಓ ರವರು ಈ ವಿಚಾರದ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ.