ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಮಿತಿ ಅಧ್ಯಕ್ಷರಾದ ಎನ್ ವೆಂಕಟೇಶ್ ಅಣ್ಣನವರನ್ನು ಬೀದರ್ ಆಸ್ಪತ್ರೆಯಲ್ಲಿ ಸುಮಾರು ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಂತವರನ್ನು ಕಾಯಂಗೊಳಿಸಲಿಕ್ಕಾಗಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬೀದರ್ ವತಿಯಿಂದ ಒಂದುವರೆ ವರ್ಷದ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣೆದು ಪೌರ ಕಾರ್ಮಿಕರನ್ನು ಈಗ ಖಾಯಂಗೊಳಿಸಿದ್ದಕ್ಕಾಗಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಮಿತಿಗೆ ಬೀದರ್ ನ ಪೌರಕಾರ್ಮಿಕರು ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ದಿನಾಂಕ 22/ 9 /2023 ಗುರುವಾರ ಬೆಂಗಳೂರಿನಿಂದ ಸಾಯಂಕಾಲ 5: ಗಂಟೆಗೆ ಪ್ರಯಾಣ ಬೆಳೆಸಿ ರಾತ್ರಿ 9: ಗಂಟೆ 45 ನಿಮಿಷಕ್ಕೆ ಗಂಗಾವತಿಗೆ ಆಗಮಿಸಿದಾಗ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ವಸಂತ ಕುಮಾರ್ ಜೊತೆ ರಾಜ್ಯದ್ಯಕ್ಷರು ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ರಾಜ್ಯಮಟ್ಟದಲ್ಲಿ ಉನ್ನತ ಅಧಿಕಾರಿಗಳ ಜೊತೆಗೆ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ.
ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವಂತಹ ಅಧಿಕಾರಿಗಳ ಮೇಲೆ ಕೊಪ್ಪಳ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಬೆಂಗಳೂರಿನಿಂದ ಒತ್ತಡ ಹಾಕಿ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಘಟನೆಯ ಮಾದರಿಯಾಗಿ ಸಂಘಟನೆಯನ್ನು ಮಾಡಿ ತೋರಿಸಬೇಕಾಗಿದೆ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲೆಯಲ್ಲಿ ಬಲಿಷ್ಠ ಪಡಿಸಿಕೊಂಡು ದಿನ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆ ಜಾತಿ ನಿಂದನೆ ಅವಮಾನ ಬಹಿಷ್ಕಾರಗಳು ನಡೆಯುತ್ತಿದ್ದು ಇವುಗಳನ್ನು ತಡೆಗಟ್ಟಬೇಕೆಂದರೆ ಹೋರಾಟದ ಮುಖಾಂತರ ತಡೆಗಟ್ಟಬೇಕಾಗಿದೆ ದಲಿತ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಗ್ರಾಮಗಳಲ್ಲಿ ನಗರ ಪ್ರದೇಶದಲ್ಲಿ ವಿವಿಧ ನಾನಾ ರೀತಿಯ ಸುಮಾರು ನಾಗರಿಕರು ತತ್ತರಿಸಿ ಹೋಗಿದ್ದಾರೆ.
ಸಮಸ್ಯೆಗಳಿಗೆ ಸಂಘಟನೆಯ ಮುಖಾಂತರ ಪರಿಹಾರ ಒದಗಿಸಿ ಕೊಟ್ಟಾಗ ಮಾತ್ರ ಸಂಘಟನೆ ಬಲಿಷ್ಠ ಆಗಲಿಕ್ಕೆ ಸಾಧ್ಯ ಎಂದು ಜಿಲ್ಲಾಧ್ಯಕ್ಷರಾದ ವಸಂತ ಕುಮಾರ್ ಅವರಿಗೆ ಕಿವಿಮಾತು ಹೇಳಿದರು ಹಾಗೂ ಸಂಘಟನೆಯನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂ ಭಗವಾನ್ ಗೌತಮ್ ಬುದ್ಧನ ತತ್ವ ಸಿದ್ಧಾಂತದ ಅಡಿಯಲ್ಲಿ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕೆಂದು ಎಂದು ಹೇಳಿದರು ಸ್ವಾಗತಿಸಿಕೊಂಡು ಸನ್ಮಾನಿಸಿ ಗೌರವಿಸಲಾಯಿತು ಅವರನ್ನು ಗಂಗಾವತಿಯಲ್ಲಿ ಉಳಿಸಿಕೊಂಡು ಶನಿವಾರ ಬೆಳಿಗ್ಗೆ 6 ಗಂಟೆಗೆ ಬೀದರನ ಕಡೆಗೆ ಪ್ರಯಾಣ ಸುಖಕರವಾಗಿರಲೆಂದು ಕರ್ನಾಟಕ ದಲಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಹಾರೈಸಲಾಯಿತು.