ಗಂಗಾವತಿ: ಸಿದ್ಧಾರ್ಥ ಎಜುಕೇಷನ್ & ಸೋಷಿಯಲ್ ವೇಲ್ ಪೇರ್ ಟ್ರಸ್ಟ್ ವತಿಯಿಂದ ಕುಮಾರರಾಮ ಜಯಂತಿ ಅಂಗವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು.ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿದರು.

ಈ ಕಾರ್ಯಕ್ರಮ ಉದ್ಘಾಟಕರಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ತಬಲಾ ವಾದ ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಡಾ.ಬಿ ಅರ್ ಅಂಬೇಡ್ಕರ್ ಅರ್ಶಿವಾದ ಮತ್ತು ಅವರು ಕೊಟ್ಟು ಸಂವಿಧಾನದದಿಂದ ನಾವು ಈ ಸಮಾಜದ ಬದುಕಲು ಸಾದ್ಯ ಎಂದರು.ಭಾರತದ ದೇಶದ ಸಂವಿಧಾನದ ಇರಲಿಲ್ಲ ಎಂದರೆ ಸುಂದರ ಜೀವನ ಕಟ್ಟಲು ಸಾದ್ಯವಿಲ್ಲ ಎಂದರು.ಅದು ಒಂದು ಮಹಾ ಗ್ರಂಥ ಎಂದರು.ಸಮಾಜದ ಇನ್ನೂ ಈ ಸಂಸ್ಥೆ ಉತ್ತಮ ಸಮಾಜ ಸೇವೆ ಮಾಡಲಿ ನಮ್ಮ ಸಹಕಾರ ಇರುತ್ತದೆ ಎಂದರು.ಮುಂದುವರಿದ ಮಾತನಾಡಿದ ಚಿಂತಕ ಹಾಗೂ ಸಾಹಿತ್ಯ ಲಿಂಗಣ್ಣ ಜಂಗರಮಹಳ್ಳಿ.ಈ ದೇಶದ ಸ್ತ್ರೀಯರಿಗೆ ಸಹೋದರ ಸ್ಥಾನಮಾನ ಕೊಟ್ಟವರು ಎಂದರ ಅದು ಕುಮಾರರಾಮ ಎಂದರು.ಆ ಅಯೋಧ್ಯೆಯ ರಾಮಗಿಂತ ಕುಮಾರರಾಮ ಶ್ರೇಷ್ಠ ಎಂದರು.


ಕನ್ನಡನಾಡಿನ ಚರಿತ್ರೆಯಲ್ಲಿ ಜನಸಮುದಾಯದ ನಡುವಿನಿಂದ ಬಂದ ಮರೆಯಲಾಗದ ರಾಜನೆಂದರೆ ಕುಮ್ಮಟದ ಅಧಿಪತಿ ಕುಮಾರ ರಾಮನಾಥ. ಚರಿತ್ರೆಯನ್ನು ವರ್ತಮಾನದ ದೃಷ್ಠಿಕೋನದಲ್ಲಿ ನೋಡುವಾಗ, ಸಾಮಾನ್ಯವಾಗಿ ನಿರಂಕುಶ ರಾಜಪ್ರಭುತ್ವದ ಕ್ರೂರಮುಖಗಳನ್ನು ಜೊತೆಗೆ, ಯಾವುದು ಜನಪರವಾಗಿ ಇರುತ್ತದೆಯೋ ಎಂಬ ಪ್ರಶ್ನೆಗಳನ್ನು ಮರ್ಜಿಯಲ್ಲಿಟ್ಟುಕೊಂಡೇ ನಮ್ಮ ಸಂಶ್ಲೇಷಣೆಗಳು ನಡೆಯುತ್ತವೆ. ಇದು ದಿಟವೂ ಕೂಡ. ಆದರೆ ಭಾರತೀಯ ಚಾರಿತ್ರಿಕ ಅವಲೋಕವನ್ನು ಸೂಕ್ಷ್ಮವಾಗಿ ನೋಡಿದರೆ ಇಡೀ ದಕ್ಷಿಣ ಭಾರತದ ಜನಮಾನಸದಲ್ಲಿ ಬೇರೂರಿದ ಏಕೈಕ ಅರಸ ಗಂಡುಗಲಿ ಕುಮಾರರಾಮ. 13ನೇ ಶತಮಾನದ ರಾಜನೊಬ್ಬ ಸಮಾಜದ ಅಪಾರ ಗೌರವ, ಮನ್ನಣೆ, ಪೂಜೆ, ಆದರಗಳಿಗೊಳಗಾದ ವ್ಯಕ್ತಿತ್ವದವನಾಗಿದ್ದನೆಂದರೆ ಅದು ಬಹುದೊಡ್ಡ ಪವಾಡದಂತೆ ಗೋಚರಿಸುತ್ತದೆ. ಆದರೆ ಕುಮಾರರಾಮನ ಚರಿತ್ರೆಯು ನಿಜಾರ್ಥದಲ್ಲಿ ಜೀವಂತ ಪವಾಡವಾಗಿತ್ತೆಂಬುದನ್ನು ನಾಡಿನ ತುಂಬ ಹಬ್ಬಿದ ಆತನ ಜೀವನ ಮತ್ತು ಆದರ್ಶ ಎಂದರು ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕನಕರಾಯ,ಅಯ್ಯನ ಗೌಡ,ಸೋಮನಾಥ, ಸಂಸ್ಥೆಯ ಅಧ್ಯಕ್ಷ ಹುಸೇನಪ್ಪ ಹಂಚಿನಾಳ ತಾಪ‌ ಮಾಜಿ ಅಧ್ಯಕ್ಷ ಮಹಮ್ಮದ ರಫಿ,ಕಾಲೇಜು ಪ್ರಾಂಶುಪಾಲರಾದ ಬಸಪ್ಪ ರಮೇಶ ನಾಗೋಲಿ,ಜಾಜಿ ದೇವೇಂದ್ರಪ್ಪ ರಮೇಶ್ ಗಬ್ಬೂರು
,ಹಾಸ್ಟೆಲ್ ವಾರ್ಡನ್ವಿ
ರೂಪಾಕ್ಷಪ್ಪ,ಸುಮಂಗಲ,ಸಂಗಪ್ಪ,ಶರಣಪ್ಪ‌‌ ನಾಯಕ,ಶರಣಪ್ಪ, ಇತರರು ಇದ್ದರು.

error: Content is protected !!