ಶ್ರೀನಿವಾಸಪುರ :- ಸಾಗುವಳಿ ಮಾಡದೇ ಬೆಟ್ಟ ಗುಡ್ಡದಂತಿರುವ ಇರುವ ಗೋಮಾಳ ಜಮೀನಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿ ನೆಲವಂಕಿ ಸರ್ವೇ ನಂ 71 ರಲ್ಲಿನ ಜಮೀನನ್ನು ನೆಲವಂಕಿ ಗ್ರಾಮದ ವೆಂಕಟಮ್ಮ ಎಂಬುವರಿಗೆ ಪೋಡಿಮಾಡಿ ಹೊಸ ದುರಸ್ಥಿ ಸರ್ವೇ ನಂ 99 ಎಂದು ನಮೂದಿಸಲು ಮುಂದಾಗಿದ್ದಾರೆಂದು ಬೀಡಿಗಾನಹಳ್ಳಿ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಾಗುವಳಿ ಮಾಡದೆ ಇರುವಂತಹ ಜಮೀನಿಗೆ ಯಾವ ರೀತಿಯಾಗಿ ಅಧಿಕಾರಿಗಳು ಸಾಗುವಳಿ ಚೀಟಿ ನೀಡುತ್ತಾರೆ ಅದೇ ಜಮೀನಿಗೆ ಅಕ್ಕ ಪಕ್ಕದ ರೈತರು ಹಲವರು ಫಾರಂ ನಂಬರ್ 57 ಅರ್ಜಿಗಳನ್ನು 2019 ರಲ್ಲಿ ಸಲ್ಲಿಕೆ ಮಾಡಲಾಗಿದ್ದು ಅಕ್ಕ ಪಕ್ಕದ ಜಮೀನಿನವರು ಗುಡ್ಡವನ್ನು ಸ್ವಚ್ಛಗೊಳಿಸಲು ಮುಂದಾದಂತಹ ವೇಳೆ ಕೆಲಸಕ್ಕೆ ಅಡ್ಡಿಪಡಿಸಿದಂತಹ ವ್ಯಕ್ತಿಗೆ ಸಾಗುವಳಿ ಚೀಟಿ ನೀಡಿರುವುದು ಬೆಳಕಿಗೆ ಬಂದಿದ್ದು.
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಸಾಗುವಳಿ ಚೀಟಿ ನೀಡಲು ಸಾಧ್ಯವೇ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಬೀಡಿಗಾನಹಳ್ಳಿ ಗ್ರಾಮಸ್ಥರು ಮನವಿ ಮಾಡಿ ಕೂಡಲೇ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದೆ ಹೋದಲ್ಲಿ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.