ಗಂಗಾವತಿ: ನಗರದಲ್ಲಿ ಪಿಒಪಿ ಗಣೇಶನನ್ನು ತಯಾರು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲ
ರಾಜ್ಯದಲ್ಲಿ ಪಿಒಪಿ ಗಣೇಶ ನಿಷೇಧವಿದ್ದರೂ ಕೂಡ ಗಂಗಾವತಿ, ಕೊಪ್ಪಳ ಜಿಲ್ಲಾದ್ಯಂತ ಪಿಒಪಿ ಗಣೇಶನನ್ನು ತಯಾರು ಮಾಡುತ್ತಿರುವವರ ಮೇಲೆ ಕೊಪ್ಪಳ ಜಿಲ್ಲಾ ಆಡಳಿತ ಮತ್ತು ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಮಳಿಗೆಗಳಲ್ಲಿ ಅಲ್ಲದೆ ನಗರದಲ್ಲಿ ವಿವಿಧ ಭಾಗಗಳಲ್ಲಿ ಪಿಒಪಿ ಗಣೇಶಗಳನ್ನು
ತಯಾರು ಮಾಡುತ್ತಿದ್ದಾರೆ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳದ ನಿರ್ಲಕ್ಷ ಅನುಸರಿಸುತ್ತಿದ್ದಾರೆ.
ಅಧಿಕಾರಿಗಳ ಈ ಧೋರಣೆಗೆ, ಸಾರ್ವಜನಿಕ ವಲಯದಲ್ಲಿ ಅನುಮಾನ ಕ್ಕೆ ಕಾರಣವಾಗಿದೆ. ಈ ಹಿಂದೆ ಕೊಪ್ಪಳ ಜಿಲ್ಲಾ ಅಧಿಕಾರಿಗಳಾದಂತಹ ಸುನಿಲ್ ಕುಮಾರ್ ಅವರು ಗಂಗಾವತಿಯಲ್ಲಿ ಪಿಒಪಿ ಗಣೇಶಗಳನ್ನು ವಶಪಡಿಸಿಕೊಂಡು ಕಸ ವಿಲೇವಾರಿ ಘಟಕ ಮಲಕನಮರಡಿಗೆ ಸಾಗಿಸಿದ್ದರು. ಆದರೆ ಈಗಿನ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಸರಿನಾ..?
ಗಣೇಶ ಹಬ್ಬದ ಆಚರಣೆಗೆ ಇನ್ನು ಒಂದೇ ದಿನ ಬಾಕಿ ಉಳಿದಿದೆ. ಆದರೆ ಇಲ್ಲಿನ ನಗರಸಭೆ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಪರಿಸರ ಮಾಲಿನ್ಯ ಉಳಿಸಬೇಕಾದ ಅಧಿಕಾರಿಗಳೇ ಮೌನ ವಹಿಸಿರುವುದು ನೋಡಿದರೆ ವಿಪರ್ಯಾಸ ಮತ್ತು ಗಂಗಾವತಿಯ ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ತರಕಾರಿ ಮತ್ತು ಮೀನು ಮಾರುಕಟ್ಟೆಯ ಮಳಿಗೆಗಳನ್ನು ಪಿಒಪಿ ಗಣೇಶಗಳನ್ನು ಸಂಗ್ರಹಿಸಲು ಮತ್ತು ತಯಾರಿಸಲು ಅವಕಾಶ ನೀಡಿದರೆ ಅಧಿಕಾರಿಗಳು ತಾವೇ ಸ್ವತಃ ಪರಿಸರ ಮಾಲಿನ್ಯಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಮಲ್ಲೇಶ ನಾಯ್ಕ ಮತ್ತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಪಿಒಪಿ ಗಣೇಶ್ ತಯಾರು ಮಾಡುವಂತಹ ಸಂದರ್ಭದಲ್ಲಿ ರಾಸಾಯನಿಕ ಬಳಸಿ ತಯಾರಿಸುತ್ತಾರೆ ಆದರೆ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಪರಿಸರ ರಕ್ಷಣೆ ಮಾಡಬೇಕಾದಂತಹ ಅಧಿಕಾರಿಗಳು ಮೌನ ವಹಿಸಿರುವುದು ಏಕೆ..? ಸುಪ್ರೀಂ ಕೋರ್ಟ್ ಆದೇಶ ಇದೆ ಪಿಯುಪಿ ಗಣೇಶಗಳನ್ನು ಪರಿಸರ ಮಾಲಿನ್ಯ ಮಾಡುತ್ತದೆ ಎಂದು ಮಾಹಿತಿ ನೀಡಿದೆ ಮತ್ತು ನಿಷೇಧ ಮಾಡಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪಿಯುಪಿ ಗಣೇಶಗಳನ್ನು ನಿಷೇಧ ಮಾಡಿರುವಂತಹ ಉದಾಹರಣೆಗಳು ಇವೆ ಕೊಪ್ಪಳ ಜಿಲ್ಲಾ ಆಡಳಿತ ಅಧಿಕಾರಿಗಳು ಗಂಗಾವತಿ ನಗರದಲ್ಲಿ ಪಿಒಪಿ ಗಣೇಶನನ್ನು ತಯಾರು ಮಾಡುತ್ತಿರುವಂತಹ ಮತ್ತು ಇಲ್ಲಿನ ನಿರ್ಲಕ್ಷ ತೋರಿ ಇರುವಂತಹ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕು.
ಪರಿಸರ ಮಾಲಿನ್ಯ ಆಗುತ್ತದೆ ಎಂದು ಮಾಹಿತಿ ಇದ್ದರೂ ಕೂಡ ಇಲ್ಲಿವರೆಗೂ ಗಣೇಶ ತಯಾರು ಮಾಡುವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆ ನೈರ್ಮಲ್ಯನ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅನುಮಾನ ಮೂಡುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಪಿಒಪಿ ಬಳಸಿಕೊಂಡು ಗಣೇಶ ತಯಾರು ಮಾಡಿರುವಂತಹ ಗಣೇಶನನ್ನು ನಿಷೇಧಿಸ್ತಾರೋ ಇಲ್ಲವೋ ಎಂದು ಕಾದು ನೋಡಬೇಕು..