ಕೊಪ್ಪಳ :ಸಾಲ ಕೊಡುವ ನೆಪದಲ್ಲಿ ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸಿದ ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಮನಬಂದಂತೆ ಥಳಿಸಲಾಗಿದೆ. ಕೊಪ್ಪಳ ತಾಲೂಕಿನ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೋದಾವರಿ ಮೈಕ್ರೋಫೈನಾನ್ಸ್ ಮಹಿಳಾ ಗುಂಪಿನ ಸದಸ್ಯರಾಗಿರುವ ನಾಗಮ್ಮ ಎಂಬುವರು ಸಿಬ್ಬಂದಿ ಯಮನೂರಪ್ಪಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಾಗಮ್ಮಳಿಗೆ ಫೈನಾನ್ಸನಿಂದ ಸಾಲ ಮಂಜೂರಾಗಿತ್ತು. ಸಾಲವನ್ನು ಪಡೆಯಬೇಕಾದರೆ ನನ್ನ ಜೊತೆಗೆ ಡೇಟ್ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ ಒತ್ತಾಯಿಸಿದ್ದನೆಂಬ ಆರೋಪ ಕೇಳಿಬಂದಿದೆ. ಯಮನೂರಪ್ಪ ವಿವಾಹಿತ ನಾಗಮ್ಮಳ ಮೇಲೆ ಕೆಟ್ಟದೃಷ್ಟಿ ಇಟ್ಟಿದ್ದನಂತೆ. ರಾತ್ರಿ 10 ಗಂಟೆಗೆ ಕರೆ ಮಾಡಿ ತನ್ನ ಜೊತೆಗೆ ಸಹಕರಿಸುವಂತೆ ಹೇಳಿದ್ದನಂತೆ. ಗುಂಪಿನ ಅನುಸಾರ ನಾಗಮ್ಮಳಿಗೆ ಲೋನ್ ಮಂಜೂರಾಗಿದ್ದರೂ, ಯಮನೂರಪ್ಪ ನಾಗಮ್ಮಳಿಗೆ ಲೋನ್ ಕೊಡಲು ತಕರಾರು ಎತ್ತಿದ್ದಾನೆ.

ಸಾಲ ಕೊಡುವ ನೆಪದಲ್ಲಿ ತನ್ನ ಜೊತೆಗೆ 1 ದಿನ ಕಾಲಕಳೆಯುವಂತೆ ಹೇಳಿದ್ದ ಅಂತಾ ಯಮನೂರಪ್ಪ ವಿರುದ್ಧ ನಾಗಮ್ಮ ಆರೋಪಿಸಿದ್ದಾಳೆ. ಯಮನೂರಪ್ಪನ ವರ್ತನೆಗೆ ರೊಚ್ಚಿಗೆದ್ದ ನಾಗಮ್ಮ ಹಾಗೂ ಆಕೆಯ ತಾಯಿ ಆತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಫೈನಾನ್ಸ್ ಸಿಬ್ಬಂದಿ ನನ್ನ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಾನೆಂದು ನಾಗಪ್ಪ ಆರೋಪಿಸಿದ್ದಾಳೆ. ಅಶ್ಲೀಲ ಪದಬಳಕೆ ಮಾಡಿದಕ್ಕೆ ಸಿಟ್ಟುಬಂದು ನಾನು ಹೊಡೆದಿದ್ದೇನೆ ಅಂತಾ ಮಹಿಳೆ ಹೇಳಿದ್ದಾಳೆ. ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುನಿರಾಬಾದ್ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ.

error: Content is protected !!