ಜನಾರ್ಧನರೆಡ್ಡಿಗಂಗಾವತಿ.30 ಗಂಗಾವತಿ ಸಮೀಪದ ವಡ್ಡರಹಟ್ಟಿ
ಗ್ರಾ.ಪಂ.ಸಹಯೋಗದೊಂದಿಗೆ ಕೃಷಿ ತರಬೇತಿ ಕೇಂದ್ರ ಸಭಾಂಗಣದಲ್ಲಿ ಬುದುವಾರದಂದು ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದ
ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಅವರು ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಮಹತ್ವವಾದ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಮತ್ತು ಗೃಹ ಲಕ್ಷ್ಮೀ ಯೋಜನೆಯನ್ನು ಸರ್ಕಾರ ಒಳ್ಳೆಯ ಕಾರ್ಯಕ್ರಮ ಕರ್ನಾಟಕದಲ್ಲಿ ಒಂದು ಕುಟುಂಬದಲ್ಲಿ ರೇಷೆನಕಾರ್ಡನಲ್ಲಿ ಒಬ್ಬರಿಗೆ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳ ನಿಮ್ಮ ಅಕೌಂಟಗೆ ಜಮ ಆಗುತ್ತದೆ.ಮತ್ತು ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಕರ್ನಾಟಕ ಸರ್ಕಾರ ಮಾಡಿದೆ ಅದನ್ನು ಸರಿಯಾಗಿ ಮಹಿಳೆಯರು ಸದುಪಯೋಗ ಪಡಿದುಕೊಳ್ಳಿ,ಇನ್ನೂ ಹಲವಾರು ಯೋಜನೆಯನ್ನು ಮಾಡಿದ್ದಾರೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ನಾನು ಸಿಎಂ ಜೊತೆಗೆ ಚರ್ಚ್ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ತರುತ್ತೇನೆ ಎಂದು ಭರವಸೆಯನ್ನು ನೀಡಿದರು
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಮಂಜುಳಾ ಹತ್ತಿಮರದ, ಗ್ರಾ.ಪಂ.ಉಪಾಧ್ಯಕ್ಷ ಗೌಸುಸಾಬ ತಾಳಕೇರಿ,ಮಲ್ಲಪ್ಪ,ದಂಡಾಧಿಕಾರಿಗಳಾ ಮಂಜುನಾಥ. ತಾ.ಪಂಚಾಯತಿ ಕಾರ್ಯ ನಿರ್ವಾಹಕಧಿಕಾರಿಗಳಸದ ಲಕ್ಷ್ಮೀದೇವಿ,ಅಲ್ಪಸಂಖ್ಯಾತ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಕೊಕ್ರೀ . ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಮಹಾಂತಗೌಡ,ಸಿಡಿಪಿಓ ರೋಹಿಣಿ ಕೋಟಾಗಾರ ಸೇರಿದಂತೆ ಇತರರು ಇದ್ದರು