ದೋಟಿಹಾಳ: ಶಿರಗುಂಪಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ವಿಚಾರಿಸಲು ರವಿವಾರ ಶಿರಗುಂಪಿ ಗ್ರಾಮ ಪಂಚಾಯಿತಿ ಆಗಮಿಸಿದ ಸಿಇಓ ರಾಹುಲ್ ರತ್ನಮ್ ಪಾಂಡೆಯ ರತ್ನಂ ಅವರ ಜೊತೆ ಸಾರ್ವಜನಿಕ ಅಸಭ್ಯವಾಗಿ ವರ್ತಿಸಿದ ಘಟನೆ ರವಿವಾರ ನಡೆದಿದೆ.
ಶಿರಗುಂಪಿ ಗ್ರಾಮಕ್ಕೆ ಸಿಇಓ ಅವರು ಭೇಟಿ ವಿಷಯ ತಿಳಿದ ರಾಜ್ಯ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಆರ್.ಕೆ ದೇಸಾಯಿ ಅವರು ಆಗಮಿಸಿ ಗ್ರಾಪಂನಲ್ಲಿ ಕೂಲಿ ಕಾರ್ಮಿಕರಿಗೆ ಸರಿಯಾಗಿ ಕೆಲಸ ನೀಡುತ್ತಿಲ್ಲ ಹಾಗೂ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಅನೇಕ ಹಗರಣಗಳು ನಡೆದ್ದಿವೆ ಅವುಗಳನ್ನು ತನಿಖೆ ಮಾಡಬೇಕು ಎಂದು ಸಿಇಓ ಅವರಿಗೆ ತಿಳಿಸಿದರು.
ಈ ವೇಳೆ ಸಿಇಓ ರಾಹುಲ್ ರತ್ನಮ್ ಪಾಂಡೆಯ ಅವರು ನರೇಗಾ ಯೋಜನೆಯ ಎಡಿ ನಿಂಗನಗೌಡ ಅವರು ವಿಚಾರಿಸಿದಾಗ, ಎಡಿ ಅವರು ಮಾತನಾಡಿ, ಕೂಲಿ ಕಾರ್ಮಿಕರಿಗೆ ಈಗಾಗಲೇ ಕೆಲಸ ನೀಡಲಾಗಿದೆ. ಕಾರ್ಮಿಕರ ಮಾನವ ದಿನಗಳನ್ನು ಪರಿಶೀಲಿಸಿ ಕೆಲಸ ನೀಡುತ್ತೇವೆ ಎಂದು ಹೇಳಿದರು.
ಆರ್.ಕೆ ದೇಸಾಯಿ ಅವರು ಮಾತನಾಡಿ ತಾಲೂಕಿನ ಅನೇಕ ಗ್ರಾಪಂಗಳ ನರೇಗಾ ಯೋಜನಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೆ. ಸ್ವೀಕೃತ ಪತ್ರ ನೀಡುತ್ತಿಲ್ಲ ಎಂದು ಹೇಳಿದರು.
ಈ ವೇಳೆ ಇಒ ಶಿವಪ್ಪ ಸುಬೇದಾರ್ ಅವರು ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು ಸಾರ್ವಜನಿಕರ ಯಾವುದೇ ಅರ್ಜಿಗಳನ್ನು ಸಲ್ಲಿಸಿದರು ಸ್ವೀಕೃತ ಪತ್ರ ನೀಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ಬಳೂಟಗಿ ಗ್ರಾಮದ ವ್ಯಕ್ತಿ ಆಗಮಿಸಿ, ನಮ್ಮ ಅಂಗನವಾಡಿ ಕೇಂದ್ರದ ಸುತ್ತಲೂ ಸ್ವಚ್ಛತೆ ಸುತ್ತಲೂ ಇದರ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಸಿಇಓ ಹತ್ತಿರ ಹೋಗಿ ಮಾತನಾಡಿದನ್ನು ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ಕೆಲಸ ಕೇವಲ ಗ್ರಾಪಂ ಸಿಬ್ಬಂದಿಗಳ ಕರ್ತವ್ಯ ಮಾತ್ರವಲ್ಲ. ಇದರಲ್ಲಿ ಸಾರ್ವಜನಿಕರ ಕರ್ತವ್ಯೂ ಇದೆ ಎಂದು ಹೇಳಿದರು. ಈ ವೇಳೆ ಮಾತಿನ ಚಕಮಕಿ ಹಾಗೂ ಅಸಭ್ಯವಾಗಿ ವರ್ತಿಸಿದ ಘಟನೆ ನಡೆಯಿತು.
ಸ್ಥಳಕ್ಕೆ ಸಿಇಓ ಅಂಗ ರಕ್ಷಕ ಹಾಗೂ ಇಒ ಅವರು ಆಗಮಿಸಿ ಸಿಇಓ ಅವರನ್ನು ಕರೆದುಕೊಂಡು ವಾಹನದಲ್ಲಿ ಕೂರಿಸಿ ಕಳಿಸಿದ ಘಟನೆಯೂ ಶಿರಗುಂಪಿ ಗ್ರಾಪಂನಲ್ಲಿ ನಡೆಯಿತು.