ಗಂಗಾವತಿ :ಭಾರತ ವಿದ್ಯಾರ್ಥಿ ಫೆಡರೇಷನ್, ಎಸ್.ಎಫ್.ಐ ಸಂಘಟನೆಯು ಪ್ರತಿಭಟನೆಯ ಮೂಲಕ ಒತ್ತಾಯಿಸುವುದೇನೆಂದರೆ, 2023-24 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಡಬೇಕೆಂದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿ ಇಲಾಖೆಯ ಸಚಿವರಿಗೆ ಒತ್ತಾಯಿಸಲಾಯಿತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಹುತೇಕ ಪಿಯುಸಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಬೇಕು.ಆದರೆ ಒಂದು ಹಾಸ್ಟೆಲ್ ಗೆ ಕೇವಲ 10ರಿಂದ 30 ವಿದ್ಯಾರ್ಥಿಗಳು ಆಯ್ಕೆಯಾಗಿ ನೂರಾರು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಕ್ಕಿಲ್ಲ. ಗಂಗಾವತಿ ತಾಲೂಕಿನಲ್ಲಿ ಅತಿ ಹೆಚ್ಚು ಕಾಲೇಜುಗಳು ಇದ್ದು ದೂರದ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಗರಗಳಿಗೆ ಬರುತ್ತಿದ್ದು.ಈ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲ ಆದ್ದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಆಗತ್ಯವಾಗಿ ಬೇಕಾಗಿದೆ.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಕಿದ್ದು ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಲ್ಪಿಸಲು ಅವಕಾಶ ಮಾಡಿಕೊಡಬೇಕು. ಅಥವಾ ಹಾಸ್ಟೇಲ್ ವಂಚಿತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ಹಣದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸುತ್ತವೆ.


ಗಂಗಾವತಿಯಲ್ಲಿ ಇಂಜಿನೀಯರಿಂಗ್ ಬಿ. ಎಡ್. ನರ್ಸಿಂಗ್ ಕಾನೂನು ಮಹಾವಿದ್ಯಾಲಯದಂತಹ ವೃತ್ತಪರ ಕಾಲೇಜುಗಳು ಆರಂಭವಾಗಿ ಸುಮಾರು ವರ್ಷಗಳು ಆದರೂ ಇಲ್ಲಿಯವರೆಗೂ ಪ್ರತ್ಯೇಕ ವೃತ್ತಿಪರ ಹಾಸ್ಟೇಲ್ ಗಳಿಲ್ಲ ಎಲ್ಲಾ ವಿದ್ಯಾರ್ಥಿಗಳು ಒಂದೇ ಹಾಸ್ಟೇಲ್ ನಲ್ಲಿ ಇರಬೇಕಾದ ಪರಸ್ಥಿತಿ ಇದ್ದು ಬಿಸಿಎಮ್ ಇಲಾಖೆ ಹಾಸ್ಟೆಲ್ ಹೊಸ ಕಟ್ಟಡ ಇದೆ ಅದರಲ್ಲಿ ಪ್ರತ್ಯೇಕವಾದ ವೃತ್ತಿಪರ ಹಾಸ್ಟೆಲ್ ಆರಂಭಿಸಬೇಕು. ಎಲ್ಲಾ ವಿವಿಧ ಕೋರ್ಸಗಳ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿರುವುದರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ತೀವ್ರತರ ತೊಂದರೆಯಾಗುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅರ್ಜಿ ಹಾಕಿದ ಎಲ್ಲಾರಿಗೂ ಹಾಸ್ಟೆಲ್ ಕೂಡಿ ಆಥವಾ ಹೊಸ ಹಾಸ್ಟೆಲ್ ಆರಂಭಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಿದ ಎಲ್ಲಾರಿಗೂ ಹಾಸ್ಟೇಲ್ ಸಿಗುತ್ತದೆ ಅದೇ ಮಾದರಿಯಲ್ಲಿ ಓ.ಬಿ.ಸಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಕೊಡಿ,ಕೇವಲ ಶಾಸಕರು ಸಚಿವರ ಶಿಪಾರಸ್ಸುಗಳ ಮೇಲೆ ಹಾಸ್ಟೆಲ್‌ಗೆ ತಗೊಂಡ್ರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಡುವವರು ಯಾರು?
ಆದ್ದರಿಂದ ಗಂಗಾವತಿ ತಾಲೂಕಿನ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಹಿಂದುಳಿದ ವರ್ಗಗಳ ಇಲಾಖೆ ಸಚಿವರು ಕೊಪ್ಪಳ ಜಿಲ್ಲೆಯವರು ಇದ್ದು ಹೆಚ್ಚುವರಿ ಹಾಸ್ಟೇಲ್ ಅಥವಾ ಹೊಸ ಹಾಸ್ಟೆಲ್ ಮುಂಜೂರಿ ಮಾಡಬೇಕೆಂದು ಈ ಪ್ರತಿಭಟನೆಯ ಮೂಲಕ ಆಗ್ರಹಿಸಿದ್ದಾರೆ.
ಎಲ್ಲಾ ಇಲಾಖೆಯ ತಾಲೂಕು ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜ್ಞಾನೇಶ್ ಕಡಗದ ಅಧ್ಯಕ್ಷರು ನಾಗರಾಜ ಯು ಉಪಾಧ್ಯಕ್ಷರು ಸೋಮನಾಥ್ ಸಹ ಕಾರ್ಯದರ್ಶಿ ಶಿವಕುಮಾರ್ ಕಾರ್ಯದರ್ಶಿ ಶರೀಫ್ ಬಾಲಾಜಿ ಶಂಕರ್ ಅಮರೇಶ್ ಮೌನೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.