ಗಂಗಾವತಿ :ಗಂಗಾವತಿ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮನೆ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಗಳ ಪತ್ತೆಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೋಡಿ ಅವರ ನೇತೃತ್ವದಲ್ಲಿ ಕಾರ್ಯಚರಣೆ ಗಿಳಿದ ಗಂಗಾವತಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಡಿ ವೈ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ರವರ ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ ಅಡಿವೆಪ್ಪ ಎಸ್.ಗುದಿಗೊಪ್ಪ ಮತ್ತು ರವಿಕುಮಾರ ಕೆ.ವೈ. ಪ್ರೋಬೆಷನರಿ ಡಿ.ವೈ.ಎಸ್.ಪಿ ರವರ ನೇತೃತ್ವದಲ್ಲಿ ಕಾಮಣ್ಣ ಪಿಎಸ್‌ಐ, ಸಿಬ್ಬಂದಿಯಾದ ಚಿರಂಜೀವಿ ವಿಶ್ವನಾಥ ಮರಿಶಾಂತಗೌಡ ರಾಘವೇಂದ್ರ ಸುಭಾಷ ಮಾರುತಿ ರಮೇಶ ಮೈಲಾರಪ್ಪ, ಗುಂಡಪ್ಪ ಗಿರಿಜಮ್ಮ ಹಾಗೂ ಕೋಟೇಶ ಪ್ರಸಾದ ತಂಡವನ್ನು ನಿಯೋಜಿಸಿ.

ತನಿಖೆ ಗೆ ಮುಂದಾದ ಪೊಲೀಸ್ ಇಲಾಖೆ ಅಧಿಕಾರಿಗಳು ನಾಲ್ಕು ಆರೋಪಿಗಳನ್ನು ಬಂಧನ ಮಾಡುವ ಮೂಲಕ ಯಶಸ್ವಿಯಾಗಿದ್ದು ಅವರಿಂದ ಲಕ್ಷಾಂತರ ರೂಪಾಯಿ ಹಣ ಬೆಲೆ ಬಾಳುವಂತಹ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣಗಳ ಪತ್ತೆ ಕಾರ್ಯಕ್ಕೆ ನೇಮಕ ಮಾಡಿದ ತನಿಖಾ ತಂಡವು ಆರೋಪಿತರ ಬಗ್ಗೆ ಪ್ರಕರಣ ದಾಖಲಿಸಿ ಆದಾಗಿನಿಂದ ನಿರಂತರವಾಗಿ ಮಾಹಿತಿ ಸಂಗ್ರಹಿಸಿ ದಿನಾಂಕ: 15-07-2023 ರಂದು ಸಾಯಂಕಾಲ
ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಖಾಜಾ ತಂದೆ ಹುಸೇನ ಸಾಬ 20 ವರ್ಷ ಗೌಸಪಾಷ ತಂದೆ ಜಾವೀದ್ ಆಲಿ 28 ವರ್ಷ ಹನೀಪ್ ತಂದೆ ಕಕ್ಷಾವಲಿ ವಯಾ 21 ವರ್ಷ ಸೋಹಲ್ ತಂದೆ ಜಾಫರಸಾಬ 19 ವರ್ಷ ಆರೋಪಿಗಳು ಪೊಲೀಸರ ಮುಂದೆ ವಿಚಾರಣೆಗೆ ಒಳಪಡಿಸಿ ಆರೋಪಿತರು ಕಳ್ಳತನ ಮಾಡಿರುವ ಗಂಗಾವತಿ ನಗರ ಠಾಣಾ ವ್ಯಾಪ್ತಿಯ ಒಟ್ಟು 04 ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ.

ಆರೋಪಿತರ ತಾಬಾದಿಂದ ಒಟ್ಟು 105.9 ಗ್ರಾಂ ತೂಕದ ಅಂದಾಜು 6,36,400-00 ರೂ. ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮತ್ತು ಒಟ್ಟು 3,885 ಗ್ರಾಂ ತೂಕದ ಅಂದಾಜು 2,50,000-00 ರೂ. ಬೆಲೆ ಬಾಳುವ ಬೆಳ್ಳಿಯ ಸಾಮಾನುಗಳನ್ನು ಹಾಗೂ ಕಳ್ಳತನ ಮಾಡುವ ಕೃತ್ಯಕ್ಕೆ ಬಳಸಿದ್ದ 04: ಬೈಕುಗಳನ್ನು ಆರೋಪಿತರಿಂದ ಜಪ್ತಿ ಮಾಡಿಕೊಳ್ಳಲಾಗಿದೆ.

ವಸಪಡಿಸಿಕೊಂಡ 04 ಬೈಕಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದಾರೆ ಈ ಆರೋಪಿತರು ಕಳ್ಳತನ ಮಾಡಿದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!