ಕೊಪ್ಪಳ ಡಿಸೆಂಬರ್ 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ಶಿಥಿಲಗೊಂಡ ಕಟ್ಟಡದ ಕಾಮಗಾರಿಗಾಗಿ ಕೆ.ಹೆಚ್.ಎಸ್.ಡಿ.ಆರ್.ಪಿ ಅಂದಾಜು ಪಟ್ಟಿ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
2017-18ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿAಗ್ ವಿಭಾಗ ನಬಾರ್ಡ್ ಯೋಜನೆ ಅಡಿಯಲ್ಲಿ ಕುಕನೂರು ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡು ಉದ್ಘಾಟನೆಯಾಗಿರುತ್ತದೆ.

ಸಮುದಾಯ ಆರೋಗ್ಯ ಕೇಂದ್ರ ಕುಕನೂರಿನಲ್ಲಿ ಇರುವ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದ್ದು, ಕಾಮಗಾರಿಗಾಗಿ ಕೆ.ಹೆಚ್.ಎಸ್.ಡಿ.ಆರ್.ಪಿ ಯಿಂದ ಅಂದಾಜು ಪಟ್ಟಿ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

ಈ ಆಸ್ಪತ್ರೆಯು ಶಿಥಿಲಗೊಂಡಿರುವ ಕಾರಣ ಎಮ್.ಸಿ.ಹೆಚ್ ಸೇವೆ ಒಳಗೊಂಡಂತೆ ಆಸ್ಪತ್ರೆಯ ಇತರೆ ಆರೋಗ್ಯ ಸೇವೆಗಳನ್ನು ಕೂಡ ಎಮ್‌ಸಿಹೆಚ್ ಆಸ್ಪತ್ರೆಯಲ್ಲಿಯೇ ಒದಗಿಸಲಾಗುತ್ತಿದೆ.


ಕುಕನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ಒಬ್ಬರು ಮಕ್ಕಳ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಎನ್.ಹೆಚ್.ಎಂ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ 04 ಶುಶ್ರೂಷಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಹೊರಗುತ್ತಿಗೆ ಆಧಾರದ ಮೇರೆಗೆ 01 ಪ್ರ.ಶಾ.ತಂತ್ರಜ್ಞರು, 01 ಫಾರ್ಮಸಿ ಅಧಿಕಾರಿಗಳು, 05 ಗ್ರೂಪ್ “ಡಿ” ನೌಕರರನ್ನು ತೆಗೆದುಕೊಳ್ಳಲಾಗಿದೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ 01 ಸ್ತ್ರೀರೋಗ ತಜ್ಞರು (ಅನ್ಯ ಕಾರಣದ ನಿಮಿತ್ತ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ), 01 ಎಮ್.ಬಿ.ಬಿ.ಎಸ್ ವೈದ್ಯರು, 01 ದಂತ ವೈದ್ಯರು, 01 ಎನ್‌ಸಿಡಿ ಎಮ್.ಬಿ.ಬಿ.ಎಸ್ ವೈದ್ಯರು, 01 ಆಯುಷ್ ವೈದ್ಯರು, 05 ಶುಶ್ರೂಷಕರು, 03 ಪ್ರ.ಶಾ.ತಂತ್ರಜ್ಞರು, 01 ಫಾರ್ಮಸಿ ಅಧಿಕಾರಿಗಳು, 10 ಗ್ರೂಪ್ “ಡಿ” ನೌಕರರು ಪ್ರಸ್ತುತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ 20 ರಿಂದ 25 ಹೆರಿಗೆಗಳಾಗುತ್ತಿವೆ. ಪ್ರತಿದಿನ 150 ರಿಂದ 180 ರವರೆಗೆ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 25 ರಿಂದ 30 ಒಳರೋಗಿಗಳು ದಾಖಲಾಗಿರುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.


ಮುಂದುವರೆದು ಜಿಲ್ಲೆಯಲ್ಲಿ ತಜ್ಞವೈದ್ಯರ ಹುದ್ದೆಗಳು ಖಾಲಿಯಿರುವುದರಿಂದ ಗುತ್ತಿಗೆ ಆಧಾರದ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರತಿನಿತ್ಯ ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಾಗುತ್ತಿದೆ.

ಆದರೆ ತಜ್ಞವೈದ್ಯರ ಹುದ್ದೆಗಳಾದ ಸ್ತ್ರೀರೋಗ ತಜ್ಞರು ಹಾಗೂ ಅರವಳಿಕೆ ತಜ್ಞರು ಹುದ್ದೆಗಳಿಗೆ ಅರ್ಜಿಗಳು ಸ್ವೀಕೃತವಾಗುತ್ತಿರುವುದಿಲ್ಲ. ಕಾರಣ ಅರ್ಜಿಗಳು ಸ್ವೀಕೃತಗೊಂಡ ನಂತರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಒದಗಿಸಲಾಗುವುದು.

ಅಲ್ಲಿಯವರೆಗೂ 02 ಎಮ್‌ಬಿಬಿಎಸ್ ವೈದ್ಯರು ಹಾಗೂ ಸ್ತ್ರೀರೋಗ ತಜ್ಞರನ್ನು ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ 01 ಸ್ತ್ರೀರೋಗ ತಜ್ಞರನ್ನು ಬೇರೆ ಆರೋಗ್ಯ ಕೇಂದ್ರದಿಂದ ಪರ್ಯಾಯ ವ್ಯವಸ್ಥೆ ಮಾಡಿ  ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!