ಗಂಗಾವತಿ: ಗಂಗಾವತಿ ನಗರದಲ್ಲಿ ಕಾಂಗ್ರೆಸ್ ಪಕ್ಷವೊ ದಿನ ದಿನಕ್ಕೆ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತದೆ. ಇದನ್ನು ಕಡಿವಾಣ ಹಾಕಲು ರಾಜ್ಯ ನಾಯಕರು ಪ್ರವೇಶ ಮಾಡಬೇಕು ಎಂದು ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷ ಶರಣೇ ಗೌಡ್ರು ಹೇಳಿದರು.
ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ,ಯಾವುದೇ ಆರೋಪ ಮಾಡಬೇಕಾದರೆ ಅದಕ್ಕೆ ಸಾಕ್ಷಿಗಳು ಬೇಕು ಎಂದು ತಿಳಿಸಿದರು. ಸುಖಸುಮ್ಮನೆ ಇವರು ಮೇಲೆ ಅವರು ಅವರ ಮೇಲೆ ಇವರು ಹೀಗೆ ಆರೋಪ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದು ತಿಳಿಸಿದರು.
ವರ್ಗಾವಣೆ ದಂದೆ ; ವರ್ಗಾವಣೆ ದಂದೆಯಲ್ಲಿ ಶಾಮೀದ್ ಮಾನಿಯಾರ ಭಾಗಿಯಾಗಿಲ್ಲ ಎಂದು ತಿಳಿಸಿದರು ಇದು ಸತ್ಯಕ್ಕೆ ದೂರ ಎಂದರು. ಇನ್ನೂ ನಾವು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿವೆ.ಬಿಟ್ಟು ಬಂದಿಲ್ಲ ಇದಕ್ಕೆ ನಮ್ಮ ರಾಜ್ಯದ ನಾಯಕರು ತೀರ್ಮಾನ ತೆಗೆದುಕೊಳ್ಳುವವರು ಎಂದರು.
ಸೈನಿಕ: ಬಡ್ಡಿ ವ್ಯವಹಾರ ಮಾಡವವರು ಕೂಡ ಶಾಮೀದ್ ಮಾನಿಯಾರ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮಲ್ಲೇಶ ದೇವರಮನಿ ತಿಳಿಸಿದರು.ಪಕ್ಷದ ಜಿಲ್ಲಾ ಅಧ್ಯಕ್ಷ ಅವರು ರಾಜಿನಾಮೆ ಅಂಗೀಕರಿಸಲಾವುದು ಅದನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರ ಗಮನಕ್ಕೆ ತಂದು ನಂತರ ತೀರ್ಮಾನ ತೆಗೆದುಕೊಳ್ಳುವವವರು.
ಈ ಚುನಾವಣಾ ಸಂದರ್ಭದಲ್ಲಿ ಮಾತ್ರ ಪಕ್ಷದ ಕಾರ್ಯಕರ್ತರು ಗಣನೆಗೆ ತೆಗೆದುಕೊಂಡರೆ ಅದು ಸಂಘಟನೆ ಆಗಲ್ಲ ಎಂದರು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಪಕ್ಷ ಕಟ್ಟುವುದು ಶ್ರಮ. ಪಡೆಯಬೇಕು ಪಡೆಯಲು ಅವಕಾಶ ಇದೆ.ನಾಯಕರು ಕೈಗೆ ಸಿಗದಿದ್ದಾಗ ಪಕ್ಷ ಬೀದಿಪಾಲ ಆಗುತ್ತದೆ ಎಂದು ಹೇಳಿದರು. ಶಾಮೀದ್ ಮಾನಿಯಾರ ಎಲ್ಲಾ ಜನಾಂಗದ ಜನರ ನಡುವೆ ಹೊಂದಾಣಿಕೆ ಇರುವವರು.ಮುಂದಿನ ದಿನಗಳಲ್ಲಿ ನಾಯಕರು ಬೇಕು ಎಂಬುದು ನಮ್ಮ ವಾದ….. ಎಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಈ ಸಂದರ್ಭ ದ್ದಲ್ಲಿ ಹನುಮೇಶ್ ಕೋವಿ ನರಸಪ್ಪ ಹಾಸಗಲ್ ದೇವಣ್ಣ ದಾದ ಪೀರ್ ಲಿಂಗಪ್ಪ ಹೊಸೂರ್ ಹಾಗೂ ಇನ್ನು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.