ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ‌ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣ ಶಾಮೀದ್ ಮಾನಿಯಾರ ಎಂದು ಜುಬೇರ್ ಹೇಳಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನ್ಸಾರಿ ಹತ್ತಿರ ಇದ್ದು ಅಸ್ತಿ ಅಂತಸ್ತು ಮಾಡಿ ಸುಖಸುಪತ್ತಿಗೆ ಎಲ್ಲ ಅನುಭವಿಸಿ,ಇವಾಗ ಬೇಡವಾದರೆ ಎಂದು ಶಾಮೀದ್ ಮಾನಿಯಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಮೀದ್ ಮಾನಿಯಾರ ಈ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ ಅನ್ಸಾರಿ ಎಂದು ತಿಳಿಸಿದರು ಉಂಡ ಮನೆಗೆ ದ್ರೋಹ ಬಗೆದರು ಎಂದರು.

ಸುಮಾರು ವರ್ಷಗಳ ಕಾಲ ಅನ್ಸಾರಿ ಇಂದ ಇದ್ದು ಅಧಿಕಾರ ಮತ್ತು ಅಸ್ತಿ ಹಾಗೂ ಸಂಪತ್ತು ಅನುಭವಿಸಿ ಇವಾಗ ಇಲ್ಲ ಸಲ್ಲದು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಶಾಮೀದ್ ಮಾನಿಯಾರ ಒಬ್ಬರೆ ಕಾಂಗ್ರೆಸ್ ಪಕ್ಷಕ್ಕೆ ದುಡಿದಿಲ್ಲ ನಮ್ಮ ಪರಿಶ್ರಮ ಕೂಡ ಇದೆ.ಶಾಮೀದ್ ಮಾನಿಯಾರ ಜೊತೆ ಇರುವ ಸಂಗಡಿಗರು ಮಾತ್ರ ಅಧಿಕಾರದ ದಾಹ ಅನುಭವಿಸಬೇಕು.ಇಲ್ಲಿ ಯಾವ ? ಕಾರ್ಯಕರ್ತರು ಬೆಳೆಯಬಾರದು ಎಂಬದು ಶಾಮೀದ್ ಮಾನಿಯಾರ ಅಭಿಪ್ರಾಯ.ಇವತ್ತು ಮಾಜಿ ಸಚಿವ ಇಕ್ಬಾಲ್ ಸೋಲವುದಕ್ಕೆ ಶಾಮೀದ್ ಮಾನಿಯಾರ ಕಾರಣ ಜುಬೇರ ಹೇಳಿದರು.

ನೀಲಕಂಠಪ್ಪ ಹೊಸ್ಸಳ್ಳಿ: ಅನ್ಸಾರಿ ಮನೆಯಲ್ಲಿ ಉಂಡು ತಿಂದು ಸಾಕಷ್ಟು ಮಜಾ ಮಾಡಿ ಇವಾಗ ಆರೋಪ ಮಾಡುತ್ತಿರುವುದು ನೋಡಿದರೆ ಇವರಿಗೆ ಅಧಿಕಾರ ಬೇಕು.ಇನ್ನೂ ಮುಂದೆ ಅನ್ಸಾರಿ ಬೇಡ ಎಂಬುದು ಅರ್ಥ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಮೀದ್ ಮಾನಿಯಾರನ ದೂರ ಇಡಬೇಕು ಎಂದು ತಿಳಿಸಿದರು.

ಯಮನಪ್ಪ ವಿಠಲ್: ಕಾಂಗ್ರೆಸ್ ಪಕ್ಷವೊ ಒಂದು ದೊಡ್ಡ ಅಲದ ಮರ ಇದ್ದಂತೆ, ಇಲ್ಲಿ ಯಾರಬೇಕಾದರೂ ಇರಬಹುದು ಹೋಗಬಹುದು. ಹೋದ ಮೇಲೆ ಇನ್ನೂ ಒಬ್ಬರ ಮೇಲೆ ಸುಳ್ಳು ಆರೋಪ ಮಾಡಬಾರದು.

ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಉಳಿಯುವುದಕ್ಕೆ ಕಾರಣ ಅನ್ಸಾರಿ ಮಾತ್ರ‌ ಎಂದು ಪರೋಕ್ಷವಾಗಿ ಶರಣೇಗೌಡ್ರಗೆ ಕುಟಕಿದರು.ನೀವು ಅಗಸ್ಟ ೧೫ ರಂದು ಜಂಡೆ( ಧ್ವಜಾರೋಹಣ ಮಾಡಲು ಪ್ರತ್ಯೇಕವಾದ ಪಕ್ಷದಿಂದ ( ಬಿಜೆಪಿ ಜೆಡಿಎಸ್,ಕೆಅರ್,ಪಿ ಇನ್ನೊಂದು ಯಾವುದೇ ಪಕ್ಷದ ಜಂಡೆ ಹಿಡಿದು ಮಾಡಿ ಎಂದು ತಿಳಿಸಿದರು.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹತ್ತಿರ ಇರುವವರೆಗೆ ಮಾತ್ರ ನಿಗಮ ಮಂಡಳಿ ನೀಡಬೇಕು. ಪಕ್ಷ ಬಿಟ್ಟು ಹೋದರವರಿಗೆ ನಿಗಮ ಮಂಡಳಿ ನೀಡಬಾರದು ಎಂದರು.

ಹುಸೇನಪ್ಪ ಹಂಚಿನಾಳ: ಸ್ಥಳೀಯ ಇಲಾಖೆ ಅಧಿಕಾರಿಗಳು ವರ್ಗವಣೆ ದಂದೆಯಲ್ಲಿ ಶಾಮೀದ್ ಮಾನಿಯಾರ ಭಾಗಿ ಎಂದು ಹುಸೇನಪ್ಪ ಹಂಚಿನಾಳ ಹೇಳಿದರು. ವರ್ಗಾವಣೆ ದಂದೇಗೆ ಅನ್ಸಾರಿ ಬೆಂಬಲ ನೀಡಲಿಲ್ಲ ಆದ್ದರಿಂದ ಬೇಸತ್ತು ಹೊರಗಡೆ ಹೋಗಿದ್ದಾರೆ

ಗೈರು ಹಾಜರಿ: ಅನ್ಸಾರಿ ಬೆಂಬಲಿತ ನಗರಸಭೆ ಸದಸ್ಯರು ಗೈರು ಹಾಜರಿ ಇದ್ದರು.

error: Content is protected !!