ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಮತ್ತು ಅವರ ಆಪ್ತ ಶಾಮೀದ್ ಮಾನಿಯಾರ ನಡುವೆ ಶೀತಲ ಸಮರ ಏರ್ಪಾಟಿದೆ.ಅನ್ಸಾರಿ ರವರ ಎಲ್ಲಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೋಡಿ ಕೊಳ್ಳತ್ತಿದ ಶಾಮೀದ್ ಮಾನಿಯಾರ ಇಕ್ಬಾಲ್ ಅನ್ಸಾರಿ ಅವರಿಂದ ಮುನಿಸಿಕೊಂಡು ಹೊರಗೆ ಬಂದಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಅನ್ಸಾರಿ ನಿಂದ ಮಾತ್ರ ದೂರವಾಗಿದ್ದಾರೆ.

ಅರಶಿನ ಕೇರೆ ಹನುಮಂತಪ್ಪ ಇವರಿಗೆ ನಿಗಮ ಮಂಡಳಿ ನೀಡಬೇಕು, ಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರ ಕಾಂಗ್ರೆಸ್ ಪಕ್ಷಕ್ಕೆ ದುಡಿದವರು ಅದರಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ನಗರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶಾಮೀದ್ ಮಾನಿಯಾರ ಒತ್ತಾಯಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಬಹುಮತ ದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೊ ನಿಗಮ ಮಂಡಳಿ ಸ್ಥಾನಮಾನ ಕೊಡಬೇಕು ಎಂದು ತಿಳಿಸಿದರು. ಇಕ್ಬಾಲ್ ಅನ್ಸಾರಿ ಗರಡಿಯಲ್ಲಿ ಬೆಳದವವರು ಇವತ್ತು ಇದೆ ಮೊದಲ ಬಾರಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿನ ಬಿಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಅಥವಾ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಯಿಂದ ದೂರ ಸರಿಯುವ ಈ ಸನ್ನಿವೇಶವೆ ಕಾರಣ.
ಕಳೆದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಮತಗಳ ಪಡೆಯುವುದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಯಾವುದೇ ಅನ್ಸಾರಿ ವರ್ಚಸ್ಸು ನಿಂದ ಮತಗಳ ಬಿದ್ದಿಲ್ಲ.ಇಕ್ಬಾಲ್ ಅನ್ಸಾರಿ ವರ್ಚಸ್ಸು ಇದ್ದಿದ್ದರೆ ಗೆಲುವು ಸಾಧಿಸಬೇಕಿತ್ತು.( ಗೆಲುವುಬೇಕಿತ್ತು)
ಗಂಗಾವತಿ ಕ್ಷೇತ್ರದ ಜನರು ಪ್ರಜ್ಞವಂತರು ಯಾರಿಗೆ ಮತ ನೀಡಬೇಕು ಬೇಡ ಎಂಬುದು ತೀರ್ಮಾನ ತೆಗೆದುಕೊಳ್ಳುವವರು.

ಫ್ರೂಟ್ ಬಾಬಾ : ಒಬ್ಬ ಕಾರ್ಯಕರ್ತರು ಇಕ್ಬಾಲ್ ಅನ್ಸಾರಿನ ಭೇಟಿ ಮಾಡಬೇಕಾದರೆ ಸುಮಾರು ೫-೬ ತಾಸು ಕಾಯುಬೇಕು ಇದರಿಂದ ಅನ್ಸಾರಿ ಸೋಲಿಗೆ ಕಾರಣ.ಚುನಾವಣಾ ಸಂದರ್ಭದಲ್ಲಿ ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ತಿಳಿಸಿದರು. ಇವತ್ತು ಅಷ್ಟು ಮತಗಳ ಪಡೆಯುವುದಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮ ಇದೆ ವಿನ ಇಕ್ಬಾಲ್ ಅನ್ಸಾರಿ ಶ್ರಮ ಏನು ಇಲ್ಲ ಎಂದರು.

ರಾಜಿನಾಮೆ : ಬ್ಲಾಕ್ ಕಾಂಗ್ರೆಸ್ ಪಕ್ಷಕ್ಕೆ ಮೇ ತಿಂಗಳ ೨೫ ರಂದು ಪಕ್ಷಕ್ಕೆ ನಾನು ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡಿದೆ.ಇಲ್ಲಿ ಯಾರು? ಒತ್ತಡಕ್ಕೆ ಮಣಿದು ಕೊಟ್ಟಿಲ್ಲ ಇದನ್ನು ಅಂಗೀಕರಿಸುವ ಅಧಿಕಾರ ಇರುವುದು ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮಾತ್ರ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ. ನಮಗೆ ಹೈಕಾಮಾಂಡ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಎಂದು ಪರೋಕ್ಷವಾಗಿ ಅನ್ಸಾರಿಯ ವಿರುದ್ಧ ಕುಟಕಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ದೂರ ಸರಿದು ನೇರವಾಗಿ ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹತ್ತಿರವಾಗಲು ಪ್ರಯತ್ನ. ಅಥವಾ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ದೂರ ಸರಿವರೆ?…

ಈ ಸಂದರ್ಭದಲ್ಲಿ ಶರಣೇಗೌಡ ಯಮುನಪ್ಪ ಕೊಟ್ರಪ್ಪ ಮಲ್ಲೇಶ್ ದೇವರಮನಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

error: Content is protected !!