ಕಾರಟಗಿ :  ತಾಲೂಕಿನ ಕುಂಟೋಜಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ಆ.3 ರಂದು ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮವನ್ನು ಅರೋಗ್ಯ ಸುರಕ್ಷಾಣಧಿಕಾರಿಗಳಾದ ಗಾಯತ್ರಿ ಕೆ ರವರು  ಉದ್ಘಾಟಿಸಿ ಮಾತನಾಡಿದರು ,ಎದೆ ಹಾಲಿನ ಮಹತ್ವ ಮತ್ತು ದೇಹದ ಬೆಳವಣಿಗೆಗೆ ಅವಶ್ಯಕ ಎಂಬ ಬಗ್ಗೆ ತಿಳಿಸಿದರು. ತಾಯಿಯ ಹಾಲು ಅಮೃತ ಇದ್ದಂತೆ ಮಗು ಹುಟ್ಟಿದ ಅರ್ಧ ಗಂಟೆಯಲ್ಲಿ ಎದೆ ಹಾಲು ಕುಡಿಸುವುದರಿಂದ ಕೊಲೆಸ್ಟ್ರಾಲ್ ಅಂಶದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ನಂತರ ಅರೋಗ್ಯ ಅಧಿಕಾರಿಗಳಾದ ಶಿವಕುಮಾರ್ ಮಾತನಾಡಿ :
ಪ್ರಸಕ್ತ ವರ್ಷ ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಕೆಲ ಬದಲಾವಣೆ ತರಲಾಗುವುದು. ದುಡಿಯುವ ಪಾಲಕರು ಮಕ್ಕಳಿಗೆ ಹಾಲು ನೀಡುವುದನ್ನು ತಪ್ಪಿಸಬಾರದು. ಮಗುವಿಗೆ ಹಾಲು ನೀಡುವುದು ತಾಯಿಯ ಜವಾಬ್ದಾರಿ ಎಂದರು.

ತಾಯಿ ಹಾಲನ್ನು ಕೃತಕವಾಗಿ ಸೃಷ್ಟಿಸಲಾಗದು ಹಾಗೂ ಸ್ತನ್ಯಪಾನ ಮಾತೆಯ ಮಮತೆಯ ಪ್ರತೀಕ, ಮಗುವಿಗೆ ಹಾಲು ನೀಡುವುದರಿಂದ ಶಿಶು ಮರಣ ಪ್ರಮಾಣ ಕಡಿಮೆಯಾಗಲಿದೆ. ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗಲಿದೆ. ಮಗುವಿಗೆ ದಿನದಲ್ಲಿ 10 ರಿಂದ 15 ಬಾರಿ ಹಾಲು ಕುಡಿಸುವಂತೆ ಸಲೆಹೆ ನೀಡಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಭಾರತಿ, ಕಲಾವತಿ, ಅಂಗನವಾಡಿ ಕಾರ್ಯಕರ್ತೆಯರಾದ ರಾಜೇಶ್ವರಿ, ಕರಿಯಮ್ಮ, ಪಾರ್ವತಿ, ಸಹಾಯಕಿಯರು,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!