ಗಂಗಾವತಿ.20 ಗಂಗಾವತಿ ಕೊಪ್ಪಳ ರಸ್ತೆಯಲ್ಲಿ ಇರುವ ಗೋದಾವರಿ ಅರ್ಬನ್ ಮೆಲ್ಟಿಸ್ಟೇಟ್ ಸೋಸೈಟಿ ಲಿ. ವತಿಯಿಂದ ಗಂಗಾವತಿ ನಗರದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸತತವಾಗಿ ಮಳೆ ಸುರಿದ ಪರಿಣಾಮದಿಂದ ವ್ಯಾಪಾರಸ್ಥರಿಗೆ ಸ್ವಲ್ಪ ವ್ಯವಹಾರ ಮಾಡಲು ಕಷ್ಟವಾಗುತ್ತದೆ ಆದಕಾರಣ ಬ್ಯಾಂಕ್ ವತಿಯಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ರೇನ್ ಖೋಟ ವಿತರಣೆ ಮಾಡಲಾಯಿತು ಹಾಗೂ ಈ ಒಂದು ಬ್ಯಾಂಕ್ ವತಿಯಿಂದ ಪ್ರತಿವರ್ಷ ಏನಾದರೂ ಒಂದು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಎಂದು ಶಾಖೆಯ ಮುಖ್ಯಸ್ಥರಾದ ಸತೀಶ ಪಿ.ಪವಾರ್ ಹೇಳಿದರು ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ರವೀಂದ್ರ ಡಿ,ಶಿವಕುಮಾರ್ ಎಸ್,ಶ್ವೇತಾ ಹೊಂಬಾಳ್,ಮಲ್ಲೇಶ ಸೇರಿದಂತೆ ಇತರರು ಇದ್ದರು
