ಗಂಗಾವತಿ: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಎಲ್ ಐ ಸಿ ಪ್ರತಿನಿಧಿಗಳ ಸಂಘದ(ಲಿಖೈ) ಕಾರ್ಯಕರ್ತರು ಗುರುವಾರ ದೇಶವ್ಯಾಪಿ ಎಲ್ಐಸಿ ಕಚೇರಿಯ ಎದುರು ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಲಿಖೈ ಸಂಘಟನೆಯ ವಿಭಾಗೀಯ ಮುಖಂಡರಾದ ವಲಿಮೊಹೀಯುದ್ದೀನ್ ಹಾಗೂ ನಿರುಪಾದಿ ಬೆಣಕಲ್ ಮಾತನಾಡಿ, ದೇಶದ ಆರ್ಥಿಕ ಸದೃಢತೆಯಲ್ಲಿ ಎಲ್ಐಸಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ ಸಂಸ್ಥೆಯ ಬೆಳವಣಿಗೆಯಲ್ಲಿ ದೇಶದಲ್ಲಿರುವ ಲಕ್ಷಾಂತರ ಪ್ರತಿನಿಧಿಗಳು ಹಗಲು ರಾತ್ರಿ ಜನಸಾಮಾನ್ಯರ ಹತ್ತಿರ ಹೋಗಿ ಎಲ್ಐಸಿ ಪಾಲಿಸಿಗಳನ್ನ ಮಾಡಿಸುವ ಮೂಲಕ ದೇಶದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಹೂಡುತ್ತಿದ್ದಾರೆ ಇಂತಹ ಪ್ರತಿನಿಧಿಗಳನ್ನು ಎಲ್ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ ಮಾಡಿದ್ದು ಗುಂಪು ವಿಮೆ ಮತ್ತು ಎಲ್ಐಸಿ ಕಮಿಷನ್ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಶಕಗಳಿಂದ ಹೋರಾಟಗಳ ನಡೆಸಿದರು ನಿರ್ಲಕ್ಷ ಮಾಡಲಾಗುತ್ತಿದೆ ಇದನ್ನು ಖಂಡಿಸಿ ಗುರುವಾರ ದೇಶ ವ್ಯಾಪಿಯಾಗಿ ಜನರ ಮತ್ತು ಗ್ರಾಹಕರ ಗಮನ ಸೆಳೆಯಲು ಎಲ್ಐಸಿ ಕಚೇರಿಗಳ ಎದುರು ಪೋಸ್ಟರ್ ಪ್ರದರ್ಶನ ಮಾಡಿ ಪ್ರತಿಭಟಿಸಲಾಗುತ್ತಿದೆ ಎಲ್ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ಕೂಡಲೇ ಎಲ್ಐಸಿ ಪ್ರತಿನಿಧಿಗಳ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಗುಂಪು ವಿಮೆ ಮತ್ತು ವಯೋಮಾನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಲಿಖೈ ಸಂಘಟನೆಯ ಬಸವರಾಜ್ ಸಜ್ಜನ್ ,ಹುಸೇನ್ ಭಾಷಾ ,ಹುಸೇನ್ ಸಾಹೇಬ್ ,ರಾಘವೇಂದ್ರ ದೇಸಾಯಿ ,ದುರ್ಗಪ್ರಸಾದ್ ,ವಾಲಿ ಮೋದಿನ್,ಕೆ ನಿಂಗಜ್ಜ, ಶ್ರೀನಿವಾಸ್ ಕುಲಕರ್ಣಿ , ರಾಮಚಂದ್ರ ,ಚಂದ್ರಶೇಖರ ಸೇರಿದಂತೆ ನೂರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.