ಯಲಬುರ್ಗಾ: ತಾಲೂಕು ಕಚೇರಿಯಲ್ಲಿರುವ ಉಪ ನೋಂದಣಿ ಕಚೇರಿಯ ಲಂಚಾವತಾರ ಹಾಗೂ ಉಪನೋಂದಣ ಅಧಿಕಾರಿ ” ಯಾಸಿನ್ ಸಾಬ್ ಮುಲ್ಲಾ” ಉಪಯೋಗಿಸುವ (ಸಿಸ್ಟಮ್) ಕಂಪ್ಯೂಟರ್ ಅನ್ನು ಯಾರೋ ಅನಾಮಿಕ ವ್ಯಕ್ತಿ ಉಪಯೋಗಿಸಿ ನೋಂದಣಿ ಮಾಡುತ್ತಿರುವದು ಕಂಡುಬಂತು ನಾನು ಅವರನ್ನು ಸರ್ ನೋಂದಣಿ ಅಧಿಕಾರಿ ಯಾಸಿನ್ ಸಾಬ್ ಮುಲ್ಲಾ ಸರ್ ಇಲ್ಲವಾ ಎಂದು ಕೇಳಿದಾಗ ಬಂದ ಉತ್ತರ ಅವರು ಇಲ್ಲೇ ಟೀ ಕುಡಿಯಲು ಹೋಗಿದ್ದಾರೆ ಎಂಬುದು ಅನಾಮಿಕನ ಉತ್ತರ. ಒಬ್ಬ ಅಧಿಕಾರಿ ಉಪಯೋಗಿಸಿವ ಕಂಪ್ಯೂಟರ್ ಅನ್ನು ಒಬ್ಬ ಅನಾಮಿಕ ವ್ಯಕ್ತಿ ಉಪಯೋಗಿಸುತ್ತಿರುವುದು ನೋಡಿದರೆ ಇವರಿಗೆ ಪಾಸ್ವರ್ಡ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ.?
ಅಬ್ಬ..ಬ್ಬಾ..ಬಾ..! ಏನ್ರಿ ಇದು ನೋಂದಣಿ ಮಾಡುವ ಅಧಿಕಾರಿಗಳು ಅನಾಮಿಕ ವ್ಯಕ್ತಿಗೆ ತಮ್ಮ ಕೆಲಸವನ್ನು ಕೊಟ್ಟು ಲಾಗಿನ್ ಮಾಡಲು ಅನುಮತಿ ಕೊಟ್ರು ಹಾಗಾದ್ರೆ, ಯಾಸಿನ್ ಸಾಬ್ ಮುಲ್ಲಾ” ಅವರೇ ನಿಮ್ಮ ಕೆಲಸ ಏನು?ಅಲ್ಲಿ ನಿಮ್ಮ ಕೆಲಸ ಏನು ಹೇಳಿ ಮುಲ್ಲಾ” ಸರ್…ನೀವು ಏಕೆ ಬೇಕು ಮನೆಯಲ್ಲೇ ಇದ್ದುಬಿಡಿ ಯಾಕ್ರೀ ಬೇಕು ನಿಮಗೆ ಕೆಲಸ, ಇದೆಲ್ಲ ಕಂಡದ್ದು ಯಲಬುರ್ಗಾ ನೋಂದಣಿ ಕಚೇರಿ ಕಥೆ ವ್ಯಥೆ..ಇಲ್ಲಿ ಮಧ್ಯವರ್ತಿಗಳು ಆಡಿದ್ದೇ ಆಟ ಮಾಡಿದ್ದೆ ರೂಲ್ಸ್ ಇವರ ಹಾವಳಿ ಮಿತಿ ಮೀರಿದ್ದು, ಹಣ ನೀಡಿದರಷ್ಟೇ ಆಸ್ತಿ ನೋಂದಣಿ ಕೆಲಸ ಎಂಬ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ತಾಲೂಕು ಮತ್ತು ಜಿಲ್ಲಾಡಳಿತ ಏಕೆ ಮೌನವಿದೆ ಎಂಬ ಪ್ರಶ್ನೆ ಜನಸಾಮಾನ್ಯರದ್ದು.
ಜಮೀನು ಖರೀದಿ ಮಾಡುವವರನ್ನೆ ಟಾರ್ಗೆಟ್ ಮಾಡುವ ಮಧ್ಯವರ್ತಿಗಳು ಇಲ್ಲಸಲ್ಲದ ದಾಖಲಾತಿಗಳ ನೆಪವೊಡ್ಡಿ ಮನಬಂದಂತೆ ಹಣ ಕೀಳುತ್ತಿದ್ದಾರೆ. ಇದಕ್ಕೆ ಬಗ್ಗದಿದ್ದರೆ ಕೆಲಸ ಸಲೀಸಾಗಿ ನಡೆಯುವುದಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಹಣವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ: ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಚೇರಿ ಮುಂದೆ ನಿಯಮಗಳ ನಾಮಫಲಕವನ್ನು ಕೇವಲ ನಾಮಕಾವಸ್ಥೆಗೆ ಮಾತ್ರ ಹಾಕಲಾಗಿದ್ದು, ನಾಮಫಲಕದ ನಿಯಮಗಳಲ್ಲಿ ಒಂದೂ ಪಾಲನೆಯಾಗುತ್ತಿಲ್ಲ. ಕೆಲ ಮದ್ಯವರ್ತಿಗಳ ಅಧಿಕಾರಿಗಳ ಮುಂದೆ ಹೋಗಿ ಹಣ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದ್ದು, ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಹೀಗಿದ್ದರೂ ಸಹ ಇದಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಮೇಲಾಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ಧಾರೆ.
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಮದ್ಯವರ್ತಿಗಳು ರಾಜಾ ರೋಷವಾಗಿ ಓಡಾಡುತ್ತಿದ್ದಾರೆ. ಅಲ್ಲದೆ ಕಚೇರಿಯ ಅಭಿಲೇ ಖಾಲಾಯ ಕೊಠಡಿಗೂ ತೆರಳುತ್ತಿದ್ದಾರೆ ಎಂದರೆ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ. ದಾಖಲೆಗಳನ್ನು ಕೌಂಟರ್‌ನಲ್ಲಿ ನೀಡಿ ಟೋಕನ್ ಪಡೆದು ಸರತಿಗಾಗಿ ಕಾಯುವಂತೆ ನೋಟಿಸ್ ಬೋರ್ಡ್ ಕೂಡ ಹಾಕಿಲ್ಲ. ನೋಂದಣಿಗೆ ಸಂಬಂಧಪಟ್ಟವರು ಮಾತ್ರ ಕಚೇರಿಯಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ ಎಂದು ಜಾಗೃತಿ ನಾಮಫಲಕವಿಲ್ಲ.
ಆಸ್ತಿ ನೋಂದಣಿ ಜೊತೆಗೆ ಮಾರಾಟ ಮಾಡಿದವರು ಇಂತಿಷ್ಟು ಸರ್ಕಾರಿ ಶುಲ್ಕ ಕಟ್ಟಲೇಬೇಕು. ಈ ವೇಳೆ ಮಧ್ಯವರ್ತಿಗಳಿಗೆ ಲಂಚ ನೀಡದಿದ್ದರೆ ಆಸ್ತಿಯ ಒಟ್ಟು ಮೌಲ್ಯದಲ್ಲಿ ಏರುಪೇರು ಮಾಡಿ ಹಣ ಹೆಚ್ಚು ಕಟ್ಟುವಂತೆ ಮಾಡುತ್ತಾರೆ. ಲಂಚ ನೀಡಿದರೆ ಯಾವುದೇ ಅಡೆತಡೆ ಇಲ್ಲದೆ ಸಲೀಸಾಗಿ ಕೆಲಸವಾಗುತ್ತದೆ. ಇಷ್ಟೆಲ್ಲ ಮಧ್ಯವರ್ತಿಗಳ ದರ್ಬಾರ್ ನಡೆಯುತ್ತಿದ್ದರೂ ಕೂಡ ತಾಲೂಕು ದಂಡಾಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಪಟ್ಟಣದ ನಿವಾಸಿಗಳು ತಮ್ಮ್ ಅಳಲು ಮಾಧ್ಯಮ ಮೂಲಕ ಹೊರಹಾಕಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಧ್ಯವರ್ತಿಗಳ ಜೊತೆಗೆ ಉಪ ನೋಂದಣಿ “ಅಧಿಕಾರಿ ಯಾಸಿನ್ ಸಾಬ್ ಮುಲ್ಲಾ” ಶಾಮೀಲಾಗಿರುವ ಹಿನ್ನೆಲೆ ಲಂಚಾವತಾರ ತಾಂಡವವಾಡುತ್ತಿದೆ. ಹಣ ನೀಡದಿದ್ದರೆ ಸಾರ್ವಜನಿಕರ ಕೆಲಸಗಳು ಸಲೀಸಾಗಿ ನಡೆಯುವುದಿಲ್ಲ. ಕೆಲ ಮಧ್ಯವರ್ತಿಗಳು ಅಮಾಯಕರನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕೂಡಲೇ ಬ್ರೇಕ್ ಹಾಕುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಅಗ್ರಹ.
ಒಬ್ಬ ಸರ್ಕಾರಿ ಅಧಿಕಾರಿ ಮಾಡುವ ಕೆಲಸವನ್ನು ಮಧ್ಯವರ್ತಿಗಳು ಇಷ್ಟೊಂದು ರಾಜಾರೋಷವಾಗಿ ಮಾಡುತ್ತಿದ್ದಾರೆ ಅಂದರೆ ಇಲ್ಲಿ ಸರ್ಕಾರಿ ಅಧಿಕಾರಿಯ ಅವಶ್ಯಕತೆ ಇದೆಯೇ ಎನ್ನುವುದೇ ಒಂದು ಯಕ್ಷಪ್ರಶ್ನೆಯಾಗಿದೆ?