ಕೊಪ್ಪಳ ಜಿಲ್ಲೆಯ ಯಲಬುರ್ಗಾ ಬಾಲಕಿಯರ ಪ್ರೌಢಶಾಲೆ, ಬಿಸಿಎಂ ವಸತಿ ನಿಲಯಕ್ಕೆ ಜಿಪಂ ಸಿಇಒರವರು ಭೇಟಿ: ಪರಿಶೀಲನೆ

ಯಲಬುರ್ಗಾ ಪಟ್ಟಣದ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ಮಾನ್ಯರು, ಮಕ್ಕಳಿಗೆ ಕೊಡುವ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು. ಮಕ್ಕಳಿಂದ ಊಟದ ರುಚಿ ಬಗ್ಗೆ ಮಾಹಿತಿ ಪಡೆದರು. ಇಬ್ಬರು ವಿದ್ಯಾರ್ಥಿ ಮುಖಂಡರನ್ನು ಕರೆದು ಶಾಲೆಯ ಶೌಚಾಲಯ ಬಳಕೆ ಬಗ್ಗೆ ಹಾಗೂ ಗುಣಮಟ್ಟದ ಊಟ ನೀಡುವ ಬಗ್ಗೆ ವರದಿ ಸಿದ್ದಪಡಿಸಿ ಕೊಡಲು ತಿಳಿಸಿದರು. ಹಾಗೇ ಊಟದ ಕೋಣೆ ಸ್ವಚ್ಛತೆ ಹಾಗೇ ಊಟ ಮಾಡುವ ಮೊದಲು ಕೈತೊಳೆದುಕೊಳ್ಳುವ ಬಗ್ಗೆ ವಿದ್ಯಾರ್ಥಿ ಮುಖಂಡರು ಆಗಾಗ ನಿಗಾವಹಿಸಬೇಕು. ಏನಾದರೂ ಸಮಸ್ಯೆ ಕಂಡುಬಂದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಅನಂತರ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಭೇಟಿನೀಡಿದ ಮಾನ್ಯರು ವಸತಿ ನಿಲಯದಲ್ಲಿ ಕೊಡುತ್ತಿರುವ ಆಹಾರದ ಗುಣಮಟ್ಟವನ್ನು ಊಟ ಸವಿಯುವ ಮೂಲಕ ಪರಿಶೀಲಿಸಿ ಪ್ರತಿದಿನ ಇದೇ ರೀತಿ ಶುಚಿ ರುಚಿಯಾದ ಊಟ ಕೊಡಲು ಸಿಬ್ಬಂದಿಗೆ ತಿಳಿಸಿದರು.

ವಸತಿ ನಿಲಯದಲ್ಲಿನ ಕಂಪ್ಯೂಟರ್‌ ರೂಮ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಜ್ಞಾನದ ಬಗ್ಗೆ ಕೇಳಿದಾಗ ವಿದ್ಯಾರ್ಥಿಗಳು ತಡಬರಿಸಿದರು. ಆಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿಗಳಾದ ಶಿವಶಂಕರ್ ಕರಡಕರ್ ಅವರಿಗೆ ಕಂಪ್ಯೂಟರ್ ತರಬೇತಿ ಕೊಡಿಸಲು ತಿಳಿಸಿದರು. ವಿದ್ಯಾರ್ಥಿಗಳಿಗೆ ಆಟದ ಮೈದಾನ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಹಾಗೂ ದಾಸ್ತಾನು ಕೊಠಡಿ ಪರಿಶೀಲಿಸಿ ಎಲ್ಲ ರೀತಿಯ ಸೌಲಭ್ಯಗಳು ಕಲ್ಪಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿಗಳಾದ ಶಿವಶಂಕರ್ ಕರಡಕಲ್, ಸಿಡಿಪಿಒರಾದ ಸಿಂಧು ಎಲಿಗಾರ್, ಪಿಆರ್ ಎಇಇ ಶ್ರೀಧರ್ ತಳವಾರ, ಹಾಗೂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

RDPR #BCMವಸತಿ ಶಾಲೆ #MGNREGA #SBM #IEC

error: Content is protected !!